Home ಟಾಪ್ ಸುದ್ದಿಗಳು ಚೈತ್ರಾ ವಂಚನೆ ಪ್ರಕರಣ: ಸಿಸಿಬಿ ತನಿಖೆ ಪೂರ್ಣ

ಚೈತ್ರಾ ವಂಚನೆ ಪ್ರಕರಣ: ಸಿಸಿಬಿ ತನಿಖೆ ಪೂರ್ಣ

ಮಂಗಳೂರು: ಚೈತ್ರಾ ಬಿಜೆಪಿ ನಾಯಕ ಹಾಗೂ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ತನಿಖೆಯನ್ನು ಸಿಸಿಬಿ ಪೂರ್ಣಗೊಳಿಸಿದೆ.

ಹಿಂದೂಪರ ಹೋರಾಟಗಾರ್ತಿ ಎಂದು ಬಿಂಬಿಸಿಕೊಂಡಿದ್ದ ಚೈತ್ರಾ ಮತ್ತು ಇತರ ಆರು ಮಂದಿಯನ್ನು ಬಂಧಿಸಿ 50 ದಿನಗಳ ನಂತರ ಕೇಂದ್ರ ಸಿಸಿಬಿ ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ.

ಉದ್ಯಮಿ ಗೋವಿಂದ್ ಬಾಬು ಪೂಜಾರಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಟಿಕೆಟ್‌ಗಾಗಿ ನಗದು ಹಗರಣದಲ್ಲಿ ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ.

68 ಸಾಕ್ಷಿಗಳಿಂದ ಹೇಳಿಕೆ ಪಡೆದು ಆಡಿಯೋ, ವಿಡಿಯೋ ಮುಂತಾದ ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಚೈತ್ರಾ ಕುಂದಾಪುರ ಸೇರಿ ಆರು ಮಂದಿ ಗೋವಿಂದ್ ಬಾಬುಗೆ ಉಡುಪಿಯ ಜಿಲ್ಲೆಯ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವ ಭರವಸೆ ನೀಡಿ 5 ಕೋಟಿ ರೂಪಾಯಿ ಪಡೆದು ವಂಚಿಸಿರುವ ಪ್ರಕರಣದ ತನಿಖೆಯನ್ನು ಸಿಬಿಬಿ ಪೊಲೀಸರು ಮುಕ್ತಾಯಗೊಳಿಸಿದ್ದಾರೆ.

ಸಿಸಿಬಿ ಪೊಲೀಸರು ಮುಂದಿನ ವಾರ ಏಳು ಜನರ ವಿರುದ್ಧದ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ. ಚೈತ್ರಾ ಕುಂದಾಪುರ, ಶ್ರೀಕಾಂತ್, ಗಗನ್ ಕಡೂರ್, ವಿಜಯನಗರ ಮಠದ ಹಾಲಶ್ರೀ, ಧನರಾಜ್ ಮತ್ತು ಚನ್ನನಾಯಕ್ ಆರೋಪಿಗಳು.

Join Whatsapp
Exit mobile version