Home ಟಾಪ್ ಸುದ್ದಿಗಳು ಮಹಿಳಾ ಆಯೋಗದ ಅಧ್ಯಕ್ಷೆ – ಪೊಲೀಸ್ ಅಧಿಕಾರಿ ಕಿತ್ತಾಡಿದ ವೀಡಿಯೋ ವೈರಲ್

ಮಹಿಳಾ ಆಯೋಗದ ಅಧ್ಯಕ್ಷೆ – ಪೊಲೀಸ್ ಅಧಿಕಾರಿ ಕಿತ್ತಾಡಿದ ವೀಡಿಯೋ ವೈರಲ್

ಚಂಡೀಗಢ: ಹರಿಯಾಣ ಮಹಿಳಾ ಆಯೋಗದ ಅಧ್ಯಕ್ಷೆ ಮತ್ತು ಮಹಿಳಾ ಪೊಲೀಸ್ ಅಧಿಕಾರಿ ಕಿತ್ತಾಡಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇಬ್ಬರೂ ಕ್ಯಾಮೆರಾ ಇರುವುದನ್ನು ಲೆಕ್ಕಿಸದೇ ಅಶ್ಲೀಲ ಪದಗಳನ್ನು ಬಳಸಿದ್ದಾರೆ.

ಹರಿಯಾಣದ ಕೈತಾಲ್ ನಲ್ಲಿ ವೈವಾಹಿಕ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಸಭೆ ವೇಳೆ ಮಹಿಳಾ ಸಮಿತಿಯ ಮುಖ್ಯಸ್ಥೆ ರೇಣು ಭಾಟಿಯಾ ಅವರು ಪೊಲೀಸ್ ಅಧಿಕಾರಿಯ ಮೇಲೆ ಕೂಗಾಡಿದ್ದಾರೆ.
ವೀಡಿಯೋದಲ್ಲಿ ವೈವಾಹಿಕ ವಿವಾದ ಪ್ರಕರಣಕ್ಕೆ ಮಹಿಳೆಯನ್ನು ಮೂರು ಬಾರಿ ಪರೀಕ್ಷೆಗೆ ಒಳಪಡಿಸುವ ಅಗತ್ಯವಿತ್ತಾ? ನಿಮ್ಮಿಂದ ನಾನು ಯಾವುದೇ ಕಾರಣವನ್ನು ಕೇಳಲು ಬಯಸುವುದಿಲ್ಲ. ಹೊರಗೆ ಹೋಗಿ. ಎಸ್ ಎಚ್ ಒ ಆಕೆಯನ್ನು ಹೊರಗೆ ಕರೆದೊಯ್ಯಿರಿ, ನೀವು ಇಲಾಖಾ ವಿಚಾರಣೆಯನ್ನು ಎದುರಿಸುತ್ತೀರಾ ಎಂದು ಪೊಲೀಸ್ ಅಧಿಕಾರಿಗೆ ರೇಣು ಭಾಟಿಯಾ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ನಾನು ಅವಮಾನ ಮಾಡಿಸಿಕೊಳ್ಳಲು ನಾನು ಇಲ್ಲಿಗೆ ಬಂದಿಲ್ಲ. ಅವರು ಹೇಳುವುದನ್ನು ಕೇಳಬೇಕಾಗಿರುತ್ತದೆ ಎಂದು ಪೊಲೀಸ್ ಅಧಿಕಾರಿ ಹೇಳಿದಾಗ, ಹಾಗಾದರೆ ನೀವು ಮಹಿಳೆಯನ್ನು ಅವಮಾನಿಸಲು ಇಲ್ಲಿಗೆ ಬಂದಿದ್ದೀರಾ ಎಂದು ರೇಣು ಭಾಟಿಯಾ ಕಿಡಿಕಾರಿದ್ದಾರೆ.

Join Whatsapp
Exit mobile version