Home ಕರಾವಳಿ ಸುರತ್ಕಲ್ ಘಟನೆ ಖಂಡಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ | ಕಮೀಷನರ್ ಸ್ಥಳಕ್ಕಾಗಮಿಸುವಂತೆ ಪ್ರತಿಭಟನಾಕಾರರ ಪಟ್ಟು

ಸುರತ್ಕಲ್ ಘಟನೆ ಖಂಡಿಸಿ ಕ್ಯಾಂಪಸ್ ಫ್ರಂಟ್ ಪ್ರತಿಭಟನೆ | ಕಮೀಷನರ್ ಸ್ಥಳಕ್ಕಾಗಮಿಸುವಂತೆ ಪ್ರತಿಭಟನಾಕಾರರ ಪಟ್ಟು

ಮಂಗಳೂರು: ಸುರತ್ಕಲ್ ಎನ್ಐಟಿಕೆ ಬಳಿ ನಡೆದಿದ್ದ ಸಂಘ ಪರಿವಾರ ಕಾರ್ಯಕರ್ತರ ಅನೈತಿಕ ಗೂಂಡಾಗಿರಿ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಸುರತ್ಕಲ್ ಠಾಣಾ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದು, ಪೊಲೀಸ್ ಆಯುಕ್ತರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ.


ಠಾಣಾ ಮುಂಭಾಗದ ರಸ್ತೆಯಲ್ಲಿ ಧರಣಿ ಕೂತ ವಿದ್ಯಾರ್ಥಿಗಳು ಮಳೆ ನಡುವೆಯೂ ಪ್ರತಿಭಟನೆ ಮುಂದುವರೆಸಿದ್ದಾರೆ. ಪೊಲೀಸ್ ಆಯುಕ್ತರು ಸ್ಥಳಕ್ಕೆ ಆಗಮಿಸಬೇಕು ಹಾಗೂ ಬಿಡುಗಡೆಗೊಳಿಸಿದ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಠಾಣೆಗೆ ಮುತ್ತಿಗೆ ಹಾಕುವುದಾಗಿ ಸಿಎಫ್ಐ ನಾಯಕರು ಎಚ್ಚರಿಸಿದ್ದಾರೆ.

Join Whatsapp
Exit mobile version