Home ಟಾಪ್ ಸುದ್ದಿಗಳು ಡಿ. ಕೆ ಶಿವಕುಮಾರ್ ಭೇಟಿಯಾದ ಕ್ಯಾಂಪಸ್ ಫ್ರಂಟ್ ನಿಯೋಗ | ಸದನದಲ್ಲಿ NEP ಕುರಿತು ಚರ್ಚಿಸುವಂತೆ...

ಡಿ. ಕೆ ಶಿವಕುಮಾರ್ ಭೇಟಿಯಾದ ಕ್ಯಾಂಪಸ್ ಫ್ರಂಟ್ ನಿಯೋಗ | ಸದನದಲ್ಲಿ NEP ಕುರಿತು ಚರ್ಚಿಸುವಂತೆ ಮನವಿ

ಬೆಂಗಳೂರು: ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ನೇತೃತ್ವದ ನಿಯೋಗವು ಕೆಪಿಸಿಸಿ ಅಧ್ಯಕ್ಷರು ಹಾಗು ರಾಜಕೀಯ ಮುಖಂಡ ಡಿ. ಕೆ ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಎನ್ ಇಪಿ ಬಗ್ಗೆ ಸದನದಲ್ಲಿ ಚರ್ಚಿಸುವಂತೆ ಮನವಿ ಮಾಡಿದೆ.


ನಿಯೋಗವು ಭೇಟಿಯ ವೇಳೆ, ವಿಧಾನ ಸಭಾ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಲೋಪದೋಷಗಳ ಕರಡು ಪ್ರತಿಯನ್ನು ನೀಡಿ ಚರ್ಚಿಸುವಂತೆ ಮನವಿಯನ್ನು ಮಾಡಿತು.


ಈ ಸಂದರ್ಭ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿ ಸ್ವದಕತ್ ಶಾ, ರಾಜ್ಯ ಕಾರ್ಯದರ್ಶಿ ಸೈಯದ್ ಸರ್ಫರಾಜ್ ಉಪಸ್ಥಿತರಿದ್ದರು.

Join Whatsapp
Exit mobile version