CFI ರಾಷ್ಟ್ರೀಯ ಕಾರ್ಯದರ್ಶಿಯ ಬಂಧನ ವಿರೋಧಿಸಿ ಪ್ರತಿಭಟನೆ

Prasthutha|

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ರವೂಫ್ ಶರೀಫ್ ಅವರನ್ನು ಜಾರಿ ನಿರ್ದೇಶನಾಲಯ (ಈಡಿ) ಬಂಧಿಸಿರುವುದನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ಮಂಗಳೂರು, ಬೆಳ್ತಂಗಡಿ, ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

“ರವೂಫ್ ಶರೀಫ್ ಅವರ ಬಂಧನವು ಎನ್.ಆರ್.ಸಿ ಸಿಎಎ ಹೋರಾಟದಲ್ಲಿ ಮುಂಚೂನಿಯಲ್ಲಿದ್ದ ಹೋರಾಟಗಾರರ ಬಂಧನದ ಮುಂದವರಿದ ಭಾಗವಾಗಿದೆ. ನೀವು ಈಡಿಯನ್ನು ತೋರಿಸಿ ನಮ್ಮನ್ನು ಬೆದರಿಸುವುದಾದರೆ, ಅಂತಹ ಬೆದರಿಕೆಗಳಿಗೆ‌ ನಾವು ಜಗ್ಗುವವರಲ್ಲ” ಎಂದು ಪ್ರತಿಭಟನಕಾರರು ಹೇಳಿದರು.

- Advertisement -

ದ.ಕ. ಜಿಲ್ಲಾ ಸಮಿತಿ ವತಿಯಿಂದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆದ‌ ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯ ಸಾದಿಕ್ ಮಂಗಳೂರು, ಮಂಗಳೂರು ಜಿಲ್ಲಾ ಅಧ್ಯಕ್ಷ ಹಸನ್ ಸಿರಾಜ್, ಜಿಲ್ಲಾ ಕಾರ್ಯದರ್ಶಿ ಮುನೀರ್ ಮೊದಲಾದವರು ಉಪಸ್ಥಿತರಿದ್ದರು.

ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಸಫ್ವಾನ್ ಸುನ್ನತ್ ಕೆರೆ, ಜಿಲ್ಲಾ ಸಮಿತಿ ಸದಸ್ಯರಾದ ಹರ್ಷದ್ ಸುನ್ನತ್ ಕೆರೆ, ಝಹೀದ್ ಸುನ್ನತ್ ಕೆರೆ ಮತ್ತಿತರರು ಉಪಸ್ಥಿತರಿದ್ದರು.

ಪುತ್ತೂರು ಮಿನಿ ವಿಧಾನಸೌಧದ‌ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾ ನಾಯಕ ಸವಾದ್‌ ಮಾತನಾಡಿದರು. ಶಬೀರ್ ಕಲ್ಲರ್ಪೆ, ಇಮ್ರಾನ್, ಅರ್ಫಿದ್, ರಿಹಾಲ್, ಅನ್ಸಾರ್ ಬೆಳ್ಳಾರೆ‌ ಮೊದಲಾದವರು ಉಪಸ್ಥಿತರಿದ್ದರು.

- Advertisement -