Home ಟಾಪ್ ಸುದ್ದಿಗಳು ಇಂದಿನಿಂದ ಸಿಇಟಿ ಟೆಸ್ಟ್: ಎಕ್ಸಾಂ ಹಾಲ್ ಬಳಿ ಜಾಮರ್, ಮೆಟಲ್ ಡಿಟೆಕ್ಟರ್ ಅಳವಡಿಕೆ

ಇಂದಿನಿಂದ ಸಿಇಟಿ ಟೆಸ್ಟ್: ಎಕ್ಸಾಂ ಹಾಲ್ ಬಳಿ ಜಾಮರ್, ಮೆಟಲ್ ಡಿಟೆಕ್ಟರ್ ಅಳವಡಿಕೆ

ಬೆಂಗಳೂರು: ಇಂದಿನಿಂದ ವೃತ್ತಿಪರ ಕೋರ್ಸ್ ಗಳ ಸಿಇಟಿ ಟೆಸ್ಟ್ ಆರಂಭವಾಗ್ತಿದ್ದು, 3 ದಿನಗಳ ಕಾಲ 5 ಸಬ್ಜೆಕ್ಟ್ ಗಳ ಎಕ್ಸಾಂ ನಡೆಯಲಿದೆ. ಕೆಇಎ ಬೋರ್ಡ್ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ನೀಟ್(NEET) ಮಾದರಿಯಲ್ಲಿ ಎಕ್ಸಾಂ ನಡೆಯಲಿದೆ ಮತ್ತು ಪರೀಕ್ಷಾ ಕೇಂದ್ರಗಳ ಬಳಿ ಜಾಮರ್, ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ.

ಕೆಇಎ ಬೋರ್ಡ್ ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಿದ್ದು, ಪರೀಕ್ಷೆ ಕೇಂದ್ರದೊಳಕ್ಕೆ ಟ್ಯಾಬ್, ಮೊಬೈಲ್, ಕ್ಯಾಲ್ಕುಲೇಟರ್ ತರುವಂತಿಲ್ಲ. ಪರೀಕ್ಷಾ ಕೇಂದ್ರಗಳ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಇನ್ನು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ, ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದದ್ದು ಇನ್ನು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲು ಜೆರಾಕ್ಸ್ ಅಂಗಡಿಗಳನ್ನು ಸಹ ಮುಚ್ಚಲು ಆದೇಶಿಸಲಾಗಿದೆ.

ಒಟ್ನಲ್ಲಿ ಸಿಇಟಿ ಪರೀಕ್ಷೆಗೆ ಕೆಇಎ ಬೋರ್ಡ್ ಫುಲ್ ಅಲರ್ಟ್ ಆಗಿ, ಟೈಟ್ ಸೆಕ್ಯುರಿಟಿ ಬಳಸಿಕೊಂಡು ಪರೀಕ್ಷೆ ನಡೆಸುತ್ತಿದೆ. ಯಾವುದೇ ಅವಾಂತರ ಉದ್ಭವಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ.

Join Whatsapp
Exit mobile version