ಗುಜರಾತ್ʼನ ಸೂರತ್ ನಗರದಲ್ಲಿ ಮೂವರು ವ್ಯಕ್ತಿಗಳು ಲಸಿಕೆಯ ಡೋಸ್ ಪಡೆಯದೆ, ಕೋವಿಡ್-19 ಇನಾಕ್ಯುಲೇಷನ್ ಪ್ರಮಾಣ ಪತ್ರಗಳನ್ನ ಪಡೆದಿರುವ ಪ್ರಕರಣ ಬಯಲಿಗೆ ಬಂದಿದೆ. ಪಾಂಡೇಸಾರ ಪ್ರದೇಶದ ನಿವಾಸಿ ಅನೂಪ್ ಸಿಂಗ್ ಮತ್ತು ಅವರ ತಂದೆ ಹರ್ಭನ್ ಸಿಂಗ್ (62) ಅವರಿಗೆ ಲಸಿಕೆಯ ಮೊದಲ ಡೋಸ್ ನೀಡಿಸುವುದಕ್ಕೆ ಬರ್ಮೋಲಿ ನಗರದ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ 13ರಂದು ನೋಂದಣಿ ಮಾಡಿಸಿದ್ದರು. ಆದರೆ ಅವರು ಪಟ್ಟಣದಿಂದ ಲಸಿಕೆ ಹಾಕಿಸಿಕೊಳ್ಳುದ ದಿನಾಂಕದಂದು ಆರೋಗ್ಯ ಕೇಂದ್ರಕ್ಕೆ ತೆರಳಿರಲಿಲ್ಲ. ಆದರೂ ಅವರಿಗೆ ಕೋವಿಡ್ ಲಸಿಕೆಯ ಪ್ರಮಾಣ ಪತ್ರ ಬಂದಿದೆ ಎಂದು ಅನೂಪ್ ಸಿಂಗ್ ತಿಳಿಸಿದ್ದಾರೆ.
ಇನ್ನೊಂದು ಕಡೆ ಮಾರ್ಚ್ 13ರಂದು ಲಸಿಕೆ ಪಡೆಯುವ ಮುನ್ನವೇ ಮತ್ತೊಂದು ಕುಟುಂಬದ ಇಬ್ಬರು ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ‘ನಮ್ಮ ಅಧಿಕೃತ ದಾಖಲೆ ಪ್ರಕಾರ ಈ ಫಲಾನುಭವಿಗಳಿಗೆ ಲಸಿಕೆ ಹಾಕಿಸಿಲ್ಲ. ಆದರೆ ಪ್ರಮಾಣ ಪತ್ರಗಳು ಬಂದಿವೆ. ನಾವು ಕೆಲವು ತಾಂತ್ರಿಕ ದೋಷಗಳನ್ನ ಸರಿಪಡಿಸಲು ಪ್ರಯತ್ನಿಸುತ್ತಿದ್ದೇವೆ. ಇನ್ನು ಈ ಬಗ್ಗೆ ಐಟಿ ಇಲಾಖೆಯೊಂದಿಗೆ ಚರ್ಚಿಸಿ, ಬಗೆಹರಿಸಲು ಪ್ರಯತ್ನಿಸುತ್ತೇವೆ ಎಂದು ಉಪ ನಗರಪಾಲಿಕೆ ಆಯುಕ್ತ (ಆರೋಗ್ಯ) ಡಾ.ಆಶೀಶ್ ನಾಯಕ್ ಹೇಳಿದ್ದಾರೆ.