Home ಟಾಪ್ ಸುದ್ದಿಗಳು ಇಂಧನದ ಮೇಲಿನ ಹೆಚ್ಚುವರಿ ತೆರಿಗೆ ಕಡಿತಗೊಳಿಸಿ: ತಮಿಳುನಾಡು ಸರ್ಕಾರ ಒತ್ತಾಯ

ಇಂಧನದ ಮೇಲಿನ ಹೆಚ್ಚುವರಿ ತೆರಿಗೆ ಕಡಿತಗೊಳಿಸಿ: ತಮಿಳುನಾಡು ಸರ್ಕಾರ ಒತ್ತಾಯ

ಚೆನ್ನೈ: ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಮತ್ತು ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸುವಂತೆ ಕೇಂದ್ರವನ್ನು ತಮಿಳುನಾಡು ಸರ್ಕಾರ ಒತ್ತಾಯಿಸಿದೆ.

ಇಂಧನದ ಮೇಲಿನ ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 2014ಕ್ಕಿಂತಲೂ ಕಡಿಮೆಯಾಗುತ್ತದೆ ಎಂದು ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ತಿಳಿಸಿದ್ದಾರೆ.

ಸದ್ಯ ವಿಧಿಸುತ್ತಿರುವ ಸೆಸ್ ಮತ್ತು ಹೆಚ್ಚುವರಿ ಶುಲ್ಕವನ್ನು ಕಡಿತಗೊಳಿಸಲು ಮತ್ತು ಮೂಲ ತೆರಿಗೆ ಬೆಲೆಯೊಂದಿಗೆ ಒದಗಿಸಲು ನಾವು ಕೇಂದ್ರ ಸರ್ಕಾರವನ್ನು ಅನೇಕ ಸಲ ಒತ್ತಾಯಿಸಿದ್ದೇವೆ. ಇದರೊಂದಿಗೆ ರಾಜ್ಯಗಳೂ ಸೂಕ್ತ ಪಾಲು ಪಡೆಯಲಿದೆ ಎಂದು ತ್ಯಾಗರಾಜನ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ತೆರಿಗೆ ಈಗಾಗಲೇ ಎಲ್ಲೆ ಮೀರಿದ್ದು, ತನ್ನ ವೈಫಲ್ಯವನ್ನು ಮುಚ್ಚಿಟ್ಟು, ರಾಜ್ಯಗಳು ತೆರಿಗೆಗಳನ್ನು ಇನ್ನಷ್ಟೂ ಕಡಿಮೆ ಮಾಡಬೇಕು ಎಂಬ ವಾದ ನ್ಯಾಯಸಮ್ಮತವಲ್ಲ ಎಂದು ತ್ಯಾಗರಾಜನ್ ತಿಳಿಸಿದ್ದಾರೆ.

Join Whatsapp
Exit mobile version