Home ಟಾಪ್ ಸುದ್ದಿಗಳು ಬೌರ್ನ್ ವಿಟಾ ಮಕ್ಕಳ ಜೀವಕ್ಕೆ ಕುತ್ತು: ಹೆಲ್ತ್ ಡ್ರಿಂಕ್ಸ್ ಪಟ್ಟಿಯಿಂದ ತೆಗೆದುಹಾಕುವಂತೆ ಕೇಂದ್ರ ಆದೇಶ

ಬೌರ್ನ್ ವಿಟಾ ಮಕ್ಕಳ ಜೀವಕ್ಕೆ ಕುತ್ತು: ಹೆಲ್ತ್ ಡ್ರಿಂಕ್ಸ್ ಪಟ್ಟಿಯಿಂದ ತೆಗೆದುಹಾಕುವಂತೆ ಕೇಂದ್ರ ಆದೇಶ

ನವದೆಹಲಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ (ಎಫ್ ಎಸ್ ಎಸ್ ಕಾಯಿದೆ 2006) ಅಡಿಯಲ್ಲಿ ಬೌರ್ನ್ ವಿಟಾ ಮತ್ತು ಇತರ ರೀತಿಯ ಪಾನೀಯಗಳನ್ನು ಇ-ಕಾಮರ್ಸ್ ಪ್ಲಾಟ್ಫಾರ್ಮ್ ಗಳಿಂದ ತೆಗೆದು ಹಾಕಿ. ಇದು ಯಾವುದೇ ‘ಆರೋಗ್ಯ ಪಾನೀಯ’ ವರ್ಗಕ್ಕೆ ಸೇರುವುದಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಪತ್ರದ ಮೂಲಕ ಆದೇಶ ನೀಡಿದೆ.


ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್ (NCPCR), ಇದು CRPC ಕಾಯಿದೆ 2005 ರ ಸೆಕ್ಷನ್ 14 ರ ಅಡಿಯಲ್ಲಿ ಈ ಬಗ್ಗೆ ವಿಚಾರಣೆಯನ್ನು ನಡೆಸಿದೆ. ಇದರ ನಂತರ 2005ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (CPCR) ಕಾಯಿದೆಯ ಸೆಕ್ಷನ್ (3) ಅಡಿಯಲ್ಲಿ ರಚಿತವಾದ ಶಾಸನಬದ್ಧ ಸಂಸ್ಥೆಗಳು ಎಫ್ ಎಸ್ ಎಸ್ ಕಾಯಿದೆ 2006ರ ಅಡಿಯಲ್ಲಿ ಆರೋಗ್ಯ ಪಾನೀಯಗಳ ಬಗ್ಗೆ ಎಫ್ ಎಸ್ ಎಸ್ ಎಐ ಮತ್ತು ಮೊಂಡೆಲೆಜ್ ಇಂಡಿಯಾ ಫುಡ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವಂತೆ ಏಪ್ರಿಲ್ 10ರ ಅಧಿಸೂಚನೆಯಲ್ಲಿ ತಿಳಿಸಿದೆ.


ಒಂದು ವರ್ಷದ ಹಿಂದೆ ಬೌರ್ನ್ ವಿಟಾ ದಲ್ಲಿ ಸಕ್ಕರೆಯ ಮಟ್ಟದ ಅಂಶ ಹೆಚ್ಚಿದೆ ಎಂದು ಹೇಳಲಾಗಿತ್ತು. ಈ ಆರೋಪ ಬಂದ ನಂತರ ಮಕ್ಕಳ ಆರೋಗ್ಯದ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (NCPCR) ಮೊಂಡೆಲೆಜ್ ಇಂಡಿಯಾ ಮಾಲೀಕತ್ವದ ಬ್ರ್ಯಾಂಡ್ ನ ಪಾನೀಯದಲ್ಲಿ ಸಮಸ್ಯೆ ಇದೆ ಎಂದು ಕಂಡುಕೊಂಡಿದೆ. ಈ ಕಾರಣಕ್ಕೆ ಈ ಬಗ್ಗೆ ಜಾಹೀರಾತು ನೀಡದಂತೆ ತಡೆ ನೀಡಲಾಗಿತ್ತು. ಪಾನೀಯದಲ್ಲಿ ಹೆಚ್ಚಿನ ಸಕ್ಕರೆ ಅಂಶ ಇದೆ ಎಂದ ನಂತರ ಆಯೋಗ ಈ ಬಗ್ಗೆ ಕ್ರಮ ತೆಗೆದುಕೊಂಡಿದೆ.

Join Whatsapp
Exit mobile version