ಕುವೈತ್’ಗೆ ಹೋಗಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ: ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್

Prasthutha|

ತಿರುವನಂತಪುರಂ: ಅಗ್ನಿ ದುರಂತದಲ್ಲಿ ಸಂತ್ರಸ್ತರಾಗಿರುವ ರಾಜ್ಯದ ಭಾರತೀಯ ಪ್ರಜೆಗಳ ನೆರವಿಗಾಗಿ ಕುವೈತ್ ಗೆ ತೆರಳಲು ಕೇಂದ್ರ ಸರ್ಕಾರ ತನಗೆ ಅನುಮತಿ ನೀಡಲಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ಆರೋಪಿಸಿದ್ದಾರೆ.

- Advertisement -


ಬುಧವಾರ ಕುವೈತ್ ನ ಕಟ್ಟಡವೊಂದಕ್ಕೆ ಬೆಂಕಿ ತಗುಲಿ ಸಾವಿಗೀಡಾದ 45 ಭಾರತೀಯರ ಮೃತದೇಹಗಳನ್ನು ಸ್ವೀಕರಿಸಲು ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿರುವಾಗ ಬೆಳಿಗ್ಗೆ ಕೊಚ್ಚಿಯ ವಿಮಾನ ನಿಲ್ದಾಣದ ಆಮದು ಕಾರ್ಗೋ ಟರ್ಮಿನಲ್ ನಲ್ಲಿ ಮೌನ ಮನೆ ಮಾಡಿತ್ತು. ಸಂತ್ರಸ್ತರ ಮೃತದೇಹಗಳನ್ನು ಅವರ ಮನೆಗಳಿಗೆ ಸಾಗಿಸಲು ಆಂಬ್ಯುಲೆನ್ಸ್ ಗಳನ್ನು ಟರ್ಮಿನಲ್ ನಲ್ಲಿ ಇರಿಸಲಾಗಿತ್ತು.


ನಮಗೆ (ಕುವೈತ್ ಗೆ ಪ್ರಯಾಣಿಸಲು) ಒಪ್ಪಿಗೆ ಸಿಗದಿರುವುದು ತುಂಬಾ ದುರದೃಷ್ಟಕರ. ಸಾವಿಗೀಡಾದವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಕೇರಳದವರು. ಚಿಕಿತ್ಸೆಯಲ್ಲಿರುವ ಹೆಚ್ಚಿನ ಜನರು ಕೇರಳದವರು ಎಂದು ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

- Advertisement -


ಕೇರಳ ಸರ್ಕಾರವು ಗುರುವಾರ ತುರ್ತು ಸಚಿವ ಸಂಪುಟ ಸಭೆಯನ್ನು ಕರೆದಿದ್ದು ವೀಣಾ ಜಾರ್ಜ್ ಅವರು ರಾಜ್ಯ ಮಿಷನ್ ನಿರ್ದೇಶಕ (ಎನ್ಎಚ್ಎಂ) ಜೀವನ್ ಬಾಬು ಅವರೊಂದಿಗೆ ತುರ್ತಾಗಿ ಕುವೈತ್ ಗೆ ಪ್ರಯಾಣಿಸಲಿದ್ದು, ಗಾಯಗೊಂಡ ರಾಜ್ಯದವರ ಚಿಕಿತ್ಸೆಗೆ ಸಂಬಂಧಿಸಿದ ಪ್ರಯತ್ನಗಳನ್ನು ಸಂಘಟಿಸಲು ನಿರ್ಧರಿಸಿದ್ದಾರೆ ಎಂದು ಹೇಳಿತ್ತು. ಸಾವಿಗೀಡಾದವರಲ್ಲಿ ಕೇರಳದ 24 ಮಂದಿ ಸೇರಿದ್ದಾರೆ. “ಗಂಭೀರವಾಗಿ ಗಾಯಗೊಂಡವರ ಸಂಖ್ಯೆಯ ಬಗ್ಗೆ ರಾಯಭಾರ ಕಚೇರಿ ನಮಗೆ ನಿಖರವಾದ ಡೇಟಾವನ್ನು ನೀಡಿಲ್ಲ. ನಾವು ಅಲ್ಲಿಂದ ಸಂಗ್ರಹಿಸಿದ ಮಾಹಿತಿಯೆಂದರೆ ಒಟ್ಟು 7 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವರಲ್ಲಿ 4 ಜನರು ಕೇರಳದವರು. ಆದರೆ ಇದು ನನ್ನ ಭೇಟಿಯ ಉದ್ದೇಶವು (ಕುವೈತ್ ಗೆ) ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ, ನಾನು ಗಾಯಾಳುಗಳೊಂದಿಗೆ ಇರಲು ಮತ್ತು ಅವರ ಅಗತ್ಯಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಬಯಸುತ್ತೇನೆ ಎಂದು ಜಾರ್ಜ್ ಸುದ್ದಿಗಾರರಿಗೆ ತಿಳಿಸಿದರು.

Join Whatsapp
Exit mobile version