Home ಟಾಪ್ ಸುದ್ದಿಗಳು ಮರಳಿದ ಕೋವಿಡ್; ಬೂಸ್ಟರ್ ಡೋಸ್‌ ‘ನಾಸಲ್ ಲಸಿಕೆ’ಗೆ ಕೇಂದ್ರ ಸರ್ಕಾರ ಅನುಮೋದನೆ

ಮರಳಿದ ಕೋವಿಡ್; ಬೂಸ್ಟರ್ ಡೋಸ್‌ ‘ನಾಸಲ್ ಲಸಿಕೆ’ಗೆ ಕೇಂದ್ರ ಸರ್ಕಾರ ಅನುಮೋದನೆ

ನವದೆಹಲಿ: ಮೂಗಿನ ಮೂಲಕ ನೀಡುವ ‘ನಾಸಲ್’ ಲಸಿಕೆಯನ್ನು ಕೋವಿಡ್‌ ವಿರುದ್ಧದ ಬೂಸ್ಟರ್ ಡೋಸ್‌ ಆಗಿ ಬಳಕೆ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.


ಇದು ಕೋವಿಡ್‌ ನಿಯಂತ್ರಣಕ್ಕಾಗಿ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಮೂಗಿನ ಮೂಲಕ ಬಳಸಬಹುದಾದ ದೇಶದ ಮೊದಲ ಕೋವಿಡ್ ಲಸಿಕೆಯಾಗಿದೆ.


2021ರ ಆಗಸ್ಟ್ ನಲ್ಲಿ ನಾಸಲ್ ಲಸಿಕೆಯ 2 ಮತ್ತು 3ನೇ ಕ್ಲಿನಿಕಲ್ ಪ್ರಯೋಗ ನಡೆದಿತ್ತು. ಈ ಲಸಿಕೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರಲಭ್ಯವಿರುತ್ತದೆ. ಇದನ್ನು ಕೋವಿಡ್‌–19 ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿದೆ.

Join Whatsapp
Exit mobile version