Home ಕರಾವಳಿ ಮಂಗಳೂರು | ಸೆಂಟ್ರಲ್ ಮಾರುಕಟ್ಟೆ ಮರು ಆರಂಭಕ್ಕೆ ಹೈಕೋರ್ಟ್ ಸಮ್ಮತಿ

ಮಂಗಳೂರು | ಸೆಂಟ್ರಲ್ ಮಾರುಕಟ್ಟೆ ಮರು ಆರಂಭಕ್ಕೆ ಹೈಕೋರ್ಟ್ ಸಮ್ಮತಿ

ಮಂಗಳೂರು : ಕೊರೊನ ನೆಪವೊಡ್ಡಿ ಸ್ಥಗಿತಗೊಳಿಸಲಾಗಿದ್ದ ಮಂಗಳೂರು ಕೇಂದ್ರ ಮಾರುಕಟ್ಟೆಯ ವ್ಯವಹಾರಗಳು, ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂದು ಮರು ಆರಂಭಗೊಂಡಿದೆ.

ಕೋವಿಡ್ 19 ನೆಪವೊಡ್ಡಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಂಗಳೂರು ಕೇಂದ್ರ ಮಾರುಕಟ್ಟೆಯ ವ್ಯಾಪಾರಸ್ಥರನ್ನು ಬೈಕಂಪಾಡಿಯಲ್ಲಿರುವ ಎಪಿಎಂಸಿಗೆ ವರ್ಗಾಯಿಸಿದ್ದರು. ಇದರ ವಿರುದ್ಧ ಅಲ್ಲಿನ ವರ್ತಕರು ಕೋರ್ಟ್ ಮೆಟ್ಟಿಲೇರಿದ್ದರು.

ವರ್ತಕರ ಪರವಾಗಿ ಯುವ ವಕೀಲರಾದ ಲತೀಫ್ ಬಿ, ಇಸ್ಮಾಯಿಲ್ ಮತ್ತು ಇಲ್ಯಾಸ್ ವಾಮಂಜೂರು ಮುಂತಾದವರು ವಾದಿಸಿದ್ದರು.  

Join Whatsapp
Exit mobile version