Home ಟಾಪ್ ಸುದ್ದಿಗಳು ಕಾನೂನು ಉಲ್ಲಂಘಿಸಿ ಮೋದಿ ಸರಕಾರದಿಂದ GST ಪರಿಹಾರ ಧನದ ದುರ್ಬಳಕೆ | ಸಿಎಜಿ ವರದಿ

ಕಾನೂನು ಉಲ್ಲಂಘಿಸಿ ಮೋದಿ ಸರಕಾರದಿಂದ GST ಪರಿಹಾರ ಧನದ ದುರ್ಬಳಕೆ | ಸಿಎಜಿ ವರದಿ


ನವದೆಹಲಿ,ಸೆ.25: ಕೇಂದ್ರದಲ್ಲಿ ಆಡಳಿತದಲ್ಲಿರುವ ಪ್ರಧಾನಿ‌ ನರೇಂದ್ರ ಮೋದಿ ನೇತೃತ್ವದ ಸರಕಾರವು ಜಿಎಸ್‌ಟಿ ಪರಿಹಾರ ಸೆಸ್ ಹಣವನ್ನು ಇತರ ಉದ್ದೇಶಗಳಿಗಾಗಿ ಬಳಸಿಕೊಂಡಿದೆ ಎಂಬುದಾಗಿ ಭಾರತದ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ) ವರದಿ ಮಾಡಿದೆ.

2017-18 ಮತ್ತು 2018-19ರ ಅವಧಿಯಲ್ಲಿ ಸಿಎಫ್‌ಐನಲ್ಲಿ 47,272 ಕೋಟಿ ರೂ.ಗಳ ಜಿಎಸ್‌ಟಿ ಪರಿಹಾರ ಸೆಸ್‌ ಅನ್ನು ಉಳಿಸಿಕೊಳ್ಳುವ ಮೂಲಕ ಸರ್ಕಾರ ಕಾನೂನು ಉಲ್ಲಂಘಿಸಿದೆ ಮತ್ತು ಈ ಹಣವನ್ನು ಇತರ ಉದ್ದೇಶಗಳಿಗಾಗಿ ಬಳಸಿದೆ ಎಂದು ಭಾರತದ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯಲ್ಲಿ ತಿಳಿಸಿದೆ.

ಇದರಿಂದಾಗಿ ಕಳೆದ ವರ್ಷ ಆದಾಯದಲ್ಲಿ ಹೆಚ್ಚಳವನ್ನು ತೋರಿಸಿ ಹಣಕಾಸಿನ ಕೊರತೆಯನ್ನು ಕುಗ್ಗಿಸಿ ತೋರಿಸಲಾಯ್ತು ಎಂಬುದಾಗಿ ಹೇಳಿದೆ.

ಆದರೆ, ಕಳೆದ ವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರವರು ಭಾರತದ ಕನ್ಸಾಲಿಡೇಟೆಡ್ ಫಂಡ್(ಸಿಎಫ್‌ಐ) ನಿಂದ ಜಿಎಸ್‌ಟಿ ಆದಾಯವನ್ನು ಕಳೆದುಕೊಂಡ ರಾಜ್ಯಗಳಿಗೆ ಪರಿಹಾರ ನೀಡಲು ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ ಎಂಬುದಾಗಿ ಸಂಸತ್ತಿನಲ್ಲಿ ತಿಳಿಸಿದ್ದರು.

Join Whatsapp
Exit mobile version