ಬೆಂಗಳೂರು: ಹಿಟ್ ಅಂಡ್ ರನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥ ಚಾಲಕರಿಗೆ 10 ವರ್ಷಗಳವರೆಗೆ ಜೈಲುಶಿಕ್ಷೆ ಸೇರಿದಂತೆ ಅಪಾರ ಮೊತ್ತದ ದಂಡ ಹಾಕುವ ಹೊಸ ಅಪಘಾತ ಪ್ರಕರಣ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದು ಲಾರಿ ಚಾಲಕರ ಜೀವನವನ್ನೇ ಕಸಿಯುವ ಈ ಕಾಯ್ದೆ ಚಾಲಕರಿಗೆ ಸಂಬಂಧಿಸಿದ ಯಾವುದೇ ಯೂನಿಯನ್ ಜೊತೆಗೆ ಚರ್ಚೆ ನಡೆಸದೆ ತೆಗೆದುಕೊಂಡ ಏಕಪಕ್ಷೀಯ ಮತ್ತು ಪಕ್ಷಪಾತದಿಂದ ಕೂಡಿದ ನಿರ್ಧಾರವಾಗಿದೆ ಈ ನಿರ್ಧಾರದಿಂದ ಕೇಂದ್ರ ಸರಕಾರ ಹಿಂದೆ ಸರಿಯಲಿ ಮಾತ್ರವಲ್ಲ ಕಾಯ್ದೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲಿ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ಕರ್ನಾಟಕ ರಾಜ್ಯಾಧ್ಯಕ್ಷ ಫಝಲುಲ್ಲಾ ಬೆಂಗಳೂರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು ಬೇಕಂತಲೇ ಯಾವ ಚಾಲಕನೂ ಅಪಘಾತ ನಡೆಸಿ ಇತರರ ಜೀವ ಕ್ಕೆ ಹಾನಿ ಮಾಡುವುದಿಲ್ಲ ಅಥವಾ ತಾನು ಎಷ್ಟು ಜಾಗರೂಕತೆ ಮತ್ತು ನಿಯಮಗಳನ್ನು ಪಾಲಿಸಿ ವಾಹನ ಚಾಲನೆ ನಡೆಸುತ್ತಿದ್ದರೂ ಇತರರು ಈ ಕ್ರಮವನ್ನು ಪಾಲಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಮಾತ್ರವಲ್ಲ ಕೇವಲ ವಾಹನಗಳ ಮುಖಾಮುಖಿಯಿಂದ ಮಾತ್ರ ಅಪಘಾತ ಸಂಭವಿಸುವುದಲ್ಲ ಹದಗೆಟ್ಟ ರಸ್ತೆಯಿಂದಲೂ ಅಪಘಾತ ಸಂಭವಿಸಿ ಚಾಲಕರ, ಸಾರ್ವಜನಿಕರ ಪ್ರಾಣಕ್ಕೆ ಹಾನಿ ಸಂಭವಿಸುವ ಸಾಧ್ಯತೆ ಇದೆ ಈ ಸಂದರ್ಭ ಯಾರನ್ನು ಹೊಣೆಯಾಗಿಸಬೇಕು ಯಾರಿಂದ ದಂಡ ವಸೂಳಿ ಮಾಡಬೇಕೆಂದು ಯೂನಿಯನ್ ಪ್ರಶ್ನಿಸುತ್ತಿದೆ.
ಈಗಾಗಲೇ ಅಗತ್ಯ ವಸ್ತುಗಳಾದ ತರಕಾರಿ, ಔಷದಿ, ಹಾಳು ಇತ್ಯಾದಿ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಉಳಿದ ಸರಕು ಸಾಗಣಿಕೆಯ ವಾಹನಗಳ ಮುಷ್ಕರ ಪ್ರಾರಂಭವಾಗಿ ನಾಲ್ಕು ದಿನ ಕಳೆದಿದೆ ಇದರಿಂದ ಮುಂದಿನ ದಿನಗಳಲ್ಲಿ ನಾಗರಿಕ ಸಾಮಾಜಕ್ಕೆ ದಿನಸಿ, ಅಗತ್ಯ ಕಾಮಗಾರಿ, ಇತ್ಯಾದಿ ಸರಕು ಸಾಗಣಿಕೆಗೆ ವ್ರತ್ಯಯವಾಗಿ ತೊಂದರೆಯಾಗುವ ಸಾಧ್ಯತೆ ಇದೆ ಆದ್ದರಿಂದ ಕೇಂದ್ರ ಸರಕಾರ ತನ್ನ ಹಠಮಾರಿ ದೋರಣೆಯಿಂದ ಹಿಂದೆ ಸರಿದು ಈ ತಿದ್ದುಪಡಿ ಕಾಯ್ದೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಚಾಲಕ ಸಮುದಾಯದ ಹಿತ ಕಾಪಾಡಲಿ ಎಂದು ಎಂದು SDTU ಆಗ್ರಹಿಸುತ್ತಿದೆ ಮಾತ್ರವಲ್ಲ ಲಾರಿ ಚಾಲಕರ ಜೀವನಕ್ಕೆ ಕತ್ತು ತರುವ ಈ ಕಾಯ್ದೆಯನ್ನು ವಿರೋಧಿಸಿ ರಾಷ್ಟ್ರವ್ಯಾಪಿ ನಡೆಸುವ ಲಾರಿ ಚಾಲಕರ ಮುಷ್ಕರಕ್ಕೆ SDTU ಬೆಂಬಲ ವ್ಯಕ್ತಪಡಿಸಿದೆ.
ಬೆಡಿಕೆಗಳು : ಅಪಘಾತ ಸಂದರ್ಭದಲ್ಲಿ ಲಾರಿ ಚಾಲಕರರು ಸಾರ್ವಜನಿಕರಿಂದ ಹಲ್ಲೆ, ದೌರ್ಜನ್ಯಕ್ಕೊಳಗಾಗಿ ಸಾವು ನೋವುಗಳು ಸಂಭವಿಸಿದ ಘಟನೆ ಹಲವು ರಾಜ್ಯಗಳಲ್ಲಿ ನಡೆಯುತ್ತಿದ್ದು ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಚಾಲಕ ಸಮುದಾಯದ ಬಗ್ಗೆ, ಅಪಘಾತದ ಸಂದರ್ಭದಲ್ಲಿ ಕಾನೂನಿನ ಇತಿ ಮಿತಿಗಳ ಬಗ್ಗೆ ಸರಕಾರ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಬೇಕು, ಯಾವುದೇ ಅಪಘಾತ ಸಂಭವಿಸಿದರೂ ಚಾಲಕರ ಸುರಕ್ಷತೆ ದ್ರಷ್ಟಿಯಿಂದ ಘಟನೆ ನಡೆದ ಸ್ಥಳದಿಂದ ಚಾಲಕನಾದವನು ಮುಂದಿನ ಪೊಲೀಸ್ ಠಾಣೆಗೆ ಹಾಜರಾಗಳು ಅನುಮತಿಸಬೇಕು, ವಿವಿಧ ರಾಜ್ಯದಲ್ಲಿ ದಂಡ ವಸೂಲಿಯ ನೆಪದಲ್ಲಿ ಕಿರುಕುಳ, ನೀಡುವುದನ್ನು ನಿಲ್ಲಿಸಬೇಕು, ಚಾಲಕ ಸಮುದಾಯದ ಜೀವನ ಹಾಗೂ ಜೀವಕ್ಕೆ ಕತ್ತು ತರುವ ಕಾಯ್ದೆಯನ್ನು ಹಿಪಡೆಯಬೇಕು,