Home ಟಾಪ್ ಸುದ್ದಿಗಳು ಭಾರತಕ್ಕೆ ಆಗಮಿಸುವ ಬ್ರಿಟನ್ ನಾಗರಿಕರಿಗೆ ಕ್ವಾರಂಟೈನ್ ಆದೇಶವನ್ನು ಹಿಂಪಡೆದ ಕೇಂದ್ರ ಸರ್ಕಾರ

ಭಾರತಕ್ಕೆ ಆಗಮಿಸುವ ಬ್ರಿಟನ್ ನಾಗರಿಕರಿಗೆ ಕ್ವಾರಂಟೈನ್ ಆದೇಶವನ್ನು ಹಿಂಪಡೆದ ಕೇಂದ್ರ ಸರ್ಕಾರ

ಭಾರತಕ್ಕೆ ಆಗಮಿಸುವ ಬ್ರಿಟನ್ ನಾಗರಿಕರಿಗೆ ಕ್ಯಾರೆಂಟೈನ್ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.


ಯುಕೆ ಭಾರತೀಯರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಕೇಂದ್ರ ಆರೋಗ್ಯ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ. ಎರಡು ಡೋಸ್ ಲಸಿಕೆ ತೆಗೆದುಕೊಂಡ ಬ್ರಿಟನ್ ನಾಗರಿಕರಿಗೆ ಕಡ್ಡಾಯವಾಗಿ ಕ್ಯಾರೆಂಟೈನ್ ವಿಧಿಸಿ ಕೇಂದ್ರ ಸರ್ಕಾರವು ಈ ತಿಂಗಳ ಒಂದರಂದು ಮಾರ್ಗಸೂಚಿ ಹೊರಡಿಸಿತ್ತು.


ಈ ಆದೇಶವನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಪ್ರಯಾಣಿಕರು ಈ ವರ್ಷದ ಫೆಬ್ರವರಿಯಲ್ಲಿ ನಿಗದಿಪಡಿಸಿದ್ದ ಹಳೆಯ ಮಾನದಂಡಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.


ಎರಡು ಡೋಸ್ ಲಸಿಕೆ ತೆಗೆದುಕೊಂಡ ಬ್ರಿಟನ್ ನಾಗರಿಕರಿಗೆ ಭಾರತವು 10 ದಿನಗಳ ಕಡ್ಡಾಯ ಕ್ವಾರಂಟೈನ್ ವಿಧಿಸಿತ್ತು. ಭಾರತದಿಂದ ಬರುವ ಪ್ರಯಾಣಿಕರಿಗೆ ಬ್ರಿಟನ್ ಸರ್ಕಾರವು ಕ್ವಾರಂಟೈನ್ ಮತ್ತು ನೆಗೆಟಿವ್ ಕೋವಿಡ್ 19 ಪರೀಕ್ಷೆ ಕಡ್ಡಾಯಗೊಳಿಸಿತ್ತು.

Join Whatsapp
Exit mobile version