ಭಾರತಕ್ಕೆ ಆಗಮಿಸುವ ಬ್ರಿಟನ್ ನಾಗರಿಕರಿಗೆ ಕ್ವಾರಂಟೈನ್ ಆದೇಶವನ್ನು ಹಿಂಪಡೆದ ಕೇಂದ್ರ ಸರ್ಕಾರ

Prasthutha|

ಭಾರತಕ್ಕೆ ಆಗಮಿಸುವ ಬ್ರಿಟನ್ ನಾಗರಿಕರಿಗೆ ಕ್ಯಾರೆಂಟೈನ್ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.

- Advertisement -


ಯುಕೆ ಭಾರತೀಯರ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಕೇಂದ್ರ ಆರೋಗ್ಯ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ. ಎರಡು ಡೋಸ್ ಲಸಿಕೆ ತೆಗೆದುಕೊಂಡ ಬ್ರಿಟನ್ ನಾಗರಿಕರಿಗೆ ಕಡ್ಡಾಯವಾಗಿ ಕ್ಯಾರೆಂಟೈನ್ ವಿಧಿಸಿ ಕೇಂದ್ರ ಸರ್ಕಾರವು ಈ ತಿಂಗಳ ಒಂದರಂದು ಮಾರ್ಗಸೂಚಿ ಹೊರಡಿಸಿತ್ತು.


ಈ ಆದೇಶವನ್ನು ಹಿಂತೆಗೆದುಕೊಳ್ಳುವುದರೊಂದಿಗೆ ಪ್ರಯಾಣಿಕರು ಈ ವರ್ಷದ ಫೆಬ್ರವರಿಯಲ್ಲಿ ನಿಗದಿಪಡಿಸಿದ್ದ ಹಳೆಯ ಮಾನದಂಡಗಳನ್ನು ಅನುಸರಿಸಬೇಕು ಎಂದು ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.

- Advertisement -


ಎರಡು ಡೋಸ್ ಲಸಿಕೆ ತೆಗೆದುಕೊಂಡ ಬ್ರಿಟನ್ ನಾಗರಿಕರಿಗೆ ಭಾರತವು 10 ದಿನಗಳ ಕಡ್ಡಾಯ ಕ್ವಾರಂಟೈನ್ ವಿಧಿಸಿತ್ತು. ಭಾರತದಿಂದ ಬರುವ ಪ್ರಯಾಣಿಕರಿಗೆ ಬ್ರಿಟನ್ ಸರ್ಕಾರವು ಕ್ವಾರಂಟೈನ್ ಮತ್ತು ನೆಗೆಟಿವ್ ಕೋವಿಡ್ 19 ಪರೀಕ್ಷೆ ಕಡ್ಡಾಯಗೊಳಿಸಿತ್ತು.



Join Whatsapp