ಹೊಸದಿಲ್ಲಿ: ಭಾರತೀಯ ಸೇನೆಯ ಪಥಸಂಚಲನ ಸೇರಿದಂತೆ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಹಿಂದಿ ರಚನೆಯನ್ನೊಳಗೊಂಡ ಪ್ರಾದೇಶಿಕ ಗೀತೆ ಅಳವಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಮಿಲಿಟರಿಯಲ್ಲಿ ಬ್ರಿಟಿಷ್ ಆಡಳಿತ ಅಳವಡಿಸಿದ ಗೀತೆಗಳ ಟ್ಯೂನ್‌ಗಳನ್ನು ನುಡಿಸಲಾಗುತ್ತಿದ್ದು, ಸೇನೆಯ ಭಾರತೀಕರಣದ ಭಾಗವಾಗಿ, ಈ ಹಾಡನ್ನು ತೆಗೆದು, ಸ್ವದೇಶಿ ಗೀತೆ ಅಳವಡಿಕೆಗೆ ರಕ್ಷಣಾ ಇಲಾಖೆ ಸಜ್ಜಾಗಿದೆ. ದೇಶಭಕ್ತಿ ಮತ್ತು ಮಿಲಿಟರಿ ಶಕ್ತಿ ಬಣ್ಣಿಸುವಂಥ 3 ಅಂತಿಮ ಹಾಡುಗಳನ್ನು ಸಲ್ಲಿಸಲು ಪ್ರಮುಖ ಮ್ಯೂಸಿಕ್ ಸಂಸ್ಥೆ ಜತೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಹಾಡುಗಳು ಸಲ್ಲಿಕೆಯಾದ 30 ದಿನಗಳೊಳಗೆ, ಟ್ಯೂನನ್ನು ಪ್ರಯೋಗಾರ್ಥವಾಗಿ ಬಳಸಲಾಗುತ್ತದೆ.
ಸೇನಾ ಸಮಾರಂಭಗಳಲ್ಲಿ ಚಾಲ್ತಿಯಲ್ಲಿರುವ ಬ್ರಿಟಿಷ್ ಮೂಲದ ಹಲವು ಟ್ಯೂನ್‌ಗಳನ್ನು ಕೈಬಿಡುವ ಸಾಧ್ಯತೆ ಇದೆ. ಬ್ರಿಟಿಷ್ ಮೂಲದ “ಅಬಿಡ್ ವಿತ್ ಮಿ…’ ಹಾಡನ್ನು ಕೈಬಿಟ್ಟು, ‘ವಂದೇ ಮಾತರಂ’ ಅಳವಡಿಕೆಯ ಪ್ರಸ್ತಾಪ ಕಳೆದ ವರ್ಷ ಕೇಳಿಬಂದಿತ್ತು. ಬ್ಯಾಂಡ್‌ಮಾರ್ಚ್‌ನಲ್ಲಿ ದೇಶದ ಐಕ್ಯತೆ ಸಾರುವ ‘ಸಾರೇ ಜಹಾನ್ ಸೆ ಅಚ್ಚಾ’ ಬಳಕೆಯಲ್ಲಿದ್ದು, ಇದನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.