ಕೇಂದ್ರ ತನಿಖಾ ಸಂಸ್ಥೆಗಳು ಕಿರುಕುಳ ನೀಡುತ್ತಿವೆ, ನಾವು ಮತ್ತೆ ಬಿಜೆಪಿಯೊಂದಿಗೆ ಕೈ ಜೋಡಿಸುವುದು ಒಳ್ಳೆಯದು : ಶಿವಸೇನೆ ಶಾಸಕ

Prasthutha|

ಮುಂಬೈ : ಕೇಂದ್ರದ ತನಿಖಾ ದಳಗಳು ನೀಡುತ್ತಿರುವ ಕಿರುಕುಳಕ್ಕೆ ಒಳಗಾಗುವುದರಿಂದ ತನ್ನ ನಾಯಕರನ್ನು ರಕ್ಷಿಸಲು ಶಿವಸೇನೆ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸುವ ಅನಿವಾರ್ಯತೆಯಿದೆ ಎಂದು ಶಿವಸೇನೆಯ ಶಾಸಕರೊಬ್ಬರು ಹೇಳಿದ್ದಾರೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆಯವರಿಗೆ ಬರೆದಿರುವ ಪತ್ರದಲ್ಲಿ ಶಾಸಕ ಪ್ರತಾಪ್‌ ಸರ್ನಾಯಕ್ ಈ ಕುರಿತು ಉಲ್ಲೇಖಿಸಿದ್ದಾರೆ. ‌

- Advertisement -

ಬಿಜೆಪಿ ಮತ್ತು ಶಿವಸೇನೆ ಮಿತ್ರಪಕ್ಷಗಳಲ್ಲದಿದ್ದರೂ, ಉಭಯ ಪಕ್ಷಗಳ ನಾಯಕರು ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಮತ್ತು ನಾವು ಇದನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಹಲವು ಕೇಂದ್ರ ತನಿಖಾ ಸಂಸ್ಥೆಗಳು ನನಗೆ ಮತ್ತು ಇತರ ಶಿವಸೇನೆ ನಾಯಕರ ಹಿಂದೆ ಬಿದ್ದಿವೆ ಮತ್ತು ಕುಟುಂಬಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಸರ್ನಾಯಕ್‌ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಶಿವಸೇನೆ ಮತ್ತು ಬಿಜೆಪಿ ಮತ್ತೆ ಒಗ್ಗೂಡಿದರೆ ಈ ನಾಯಕರು ಇಂತಹ ಕಿರುಕುಳದಿಂದ ಪಾರಾಗಬಹುದು ಎಂದು ಅವರು ಬರೆದಿದ್ದಾರೆ.

- Advertisement -

ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಳೆದ ವರ್ಷ ಸರ್ನಾಯಕ್‌ ಗೆ ಸೇರಿದ ಹಲವಾರು ಆಸ್ತಿಗಳ ಮೇಲೆ ದಾಳಿ ನಡೆಸಿತ್ತು. ಅವರ ಮಗ ವಿಹಾಂಗ್‌ ಸರ್ನಾಯಕ್‌ ಅವರನ್ನೂ ಪ್ರಶ್ನೆಗೆ ಒಳಪಡಿಸಿತ್ತು.

Join Whatsapp