ಬಳ್ಳಾರಿ: ಆರು ಸಾವಿರ ಕೋಟಿ ರೂ.ಗಳನ್ನು ಬೆಂಗಳೂರಿನ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿದ್ದು, ಬೆಂಗಳೂರಿನ ಫೆರಿಫೆರಲ್ ರಸ್ತೆ ಹಾಗೂ ಕೆರೆಗಳ ಅಭಿವೃದ್ಧಿಗೆ ನಾವು ಕ್ರಮ ವಹಿಸಿದ್ದೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಕೆಕೆಆರ್’ಡಿಬಿಯಾಗಲಿ ಬಜೆಟ್ ಅನುದಾನವಾಗಲಿ ಯಾವುದಕ್ಕೂ ಕಡಿಮೆ ಮಾಡಿಲ್ಲ ಎಂದರು.
ಹೊಸ ಕಾಮಗಾರಿಗಳ ಉದ್ಘಾಟನೆ ಬಗ್ಗೆ ಚಿಂತನೆ ಇದೆಯೇ ಎಂಬ ಬಗ್ಗೆ ಪಕ್ಷದ ಮಟ್ಟದಲ್ಲಿ ಚಿಂತನೆ ಮಾಡಿ ಹೇಳಿದ್ದಾರೆ. ಸರ್ಕಾರದ ಮುಂದೆ ಸದ್ಯಕ್ಕೆ ಇಲ್ಲ. ಅವರ ಬಳಿ ಚರ್ಚೆ ಮಾಡಿ ಸರ್ಕಾರದ ನಿಲುವನ್ನು ತಿಳಿಸಲಾಗುವುದು. ಸಿದ್ದರಾಮಯ್ಯರ ಕಾಲದಲ್ಲಿ 15 ನೇ ಹಣಕಾಸಿನ ಆಯೋಗ ತೀರ್ಮಾನವಾಗಿದೆ. ರಾಜ್ಯ ಸರ್ಕಾರದ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ. ಸರಿಯಾದ ಮಾಹಿತಿಗಳನ್ನು ನೀಡಿ, ದೃಷ್ಟಿಯಲ್ಲಿ ನೀಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆಯೋಗಕ್ಕೆ ತಿಳಿಸುವಲ್ಲಿ ಇದು ಅಂದಿನ ಸರ್ಕಾರದ ವಿಫಲವಾಗಿದೆ. ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ಈಗಿರುವ ಮುಖ್ಯ ಬಜೆಟ್, ಕೆಕೆಆರ್ ಡಿಬಿ ಬಜೆಟ್, ಮಿನರಲ್ ಫಂಡ್’ಗಳನ್ನು ಉಪಯೋಗ ಮಾಡಲು, ಈಗಾಗಲೇ ಮಂಜೂರಾಗಿರುವ ಕೆಲಸಗಳನ್ನು ನಿರ್ವಹಿಸಿಲು ವಿಶೇಷ ಇಂಜಿನಿಯರ್ ಸೆಲ್ ಅಗತ್ಯವಿದೆ. ಅದರ ಕಡೆ ಲಕ್ಷ್ಯ ಕೊಡಲಾಗುತ್ತಿದೆ. ಶೇ. 50ರಷ್ಟು ರಿಂಗ್ ರಸ್ತೆಯನ್ನು ಮಿನರಲ್ ಫಂಡ್ ನಲ್ಲಿ ಕೈಗೊಳ್ಳಲಾಗಿದೆ ಉಳಿದ ಶೇ 50 ರಷ್ಟು ಕಾಮಗಾರಿ ಎಮೆನ್ –ಇಂಡಿಯಾ ಕಾಮಗಾರಿಯ ಭಾಗವಾಗಿದೆ ಎಂದರು. ಮೊದಲ ಆದ್ಯತೆ ರಿಂಗ್ ರಸ್ತೆ ಪೂರ್ಣಗೊಳಿಸಲು ಸೂಚಿಸಿದೆ ಎಂದರು.