Home ಕರಾವಳಿ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಗೆ 4ರ ಸಂಭ್ರಮ: ಧ್ವಜಾರೋಹಣ, ವೈವಿಧ್ಯಮಯ ಕಾರ್ಯಕ್ರಮ

ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಗೆ 4ರ ಸಂಭ್ರಮ: ಧ್ವಜಾರೋಹಣ, ವೈವಿಧ್ಯಮಯ ಕಾರ್ಯಕ್ರಮ

ಮಂಗಳೂರು: ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ನ 4 ನೇ ವರ್ಷದ ಸಂಭ್ರಮದ ಅಂಗವಾಗಿ ಮಂಗಳೂರಿನ ರಾವ್ & ರಾವ್ ಸರ್ಕಲ್ ಬಳಿ ಇರುವ ಸಂಘಟನೆಯ ಕಚೇರಿ ಬಳಿ ಧ್ವಜಾರೋಹಣ ನೆರವೇರಿಸಲಾಯಿತು.

 ಉಸ್ತಾದ್ ಅಹಮ್ಮದ್ ಲಬ್ಬಯ್ ದುಆ ದೊಂದಿಗೆ ಕಾರ್ಯಕ್ರಮ ನೆರವೇರಿತು, ಅತಿಥಿಗಳಾಗಿ ಮಾಜಿ ಮೇಯರ್ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ ಅಶ್ರಫ್, ಮಂಗಳೂರಿನ ಮಾಜಿ ಶಾಸಕ ಜೆ ಆರ್ ಲೋಬೊ, ಬಿ ರೆ ವೇರ್ ಕುಡ್ಲ ದ ಅಧ್ಯಕ್ಷ ಲಕ್ಷ್ಮೇಶ್ವರ, ಸೋಶಿಯಲ್ ಫಾರೂಕ್, ಬಂದರ್ ಕಾರ್ಪೊರೇಟರ್ ಜೀನತ್ ಶಂಸುದ್ದೀನ್, ಮಾಜಿ ಕಾರ್ಪೊರೇಟರ್ ಶಶಿಧರ್ ಹೆಗ್ಡೆ ಜನಾಬ್ ಹುಸೈನ್ ಕಾಟಿಪಳ್ಳ, ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಹಿತೈಷಿಗಳು ಹಾಜರಿದ್ದರು.

ಈ ಸಂದರ್ಭದಲ್ಲಿ ಅತಿಥಿಗಳು ಮಾತನಾಡಿ, ರಕ್ತದಾನಕ್ಕೆ ಉತ್ತೇಜನ ನೀಡುವ ಹಾಗೂ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಸದುದ್ದೇಶದಿಂದ ಅಸ್ತಿತ್ವಕ್ಕೆ ಬಂದ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಇಂದು ಆರು ಸಾವಿರಕ್ಕಿಂತಲೂ ಅಧಿಕ ಯೂನಿಟ್ ರಕ್ತವನ್ನು ಸಂಗ್ರಹಿಸಿ ನೂರಾರು ರೋಗಿಗಳಿಗೆ ವಿತರಿಸಿ ಜೀವ ಉಳಿಸುವ ಪುಣ್ಯ ಕೆಲಸ ಮಾಡುತ್ತಿದೆ. ಅದೇ ರೀತಿ ಹತ್ತು ಹಲವು ಸಾಮಾಜಿಕ ಸೇವೆಯಲ್ಲಿ ತೊಡಗಿರುವ, ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ , ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸಂಸ್ಥೆಗಳಲ್ಲೊಂದು. ಈ ಒಂದು ಸಂಸ್ಥೆ ಬಾನೆತ್ತರಕ್ಕೆ ಬೆಳೆಯಲಿ ಇನ್ನು ಹೆಚ್ಚು-ಹೆಚ್ಚು ಸೇವೆ ಮಾಡುವಂತಾಗಲಿ ಎಂದು  ಶುಭಹಾರೈಸಿದರು.

 ಈ ಸಂಸ್ಥೆಗೆ ಆಧ್ಯಾತ್ಮಿಕ ಕ್ಷೇತ್ರದ ಮಹಾನ್ ವಿದ್ವಾಂಸ ಮರ್ಹೂಮ್ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಚಾಲನೆ ನೀಡಿದ್ದರು, ರಕ್ತದಾನ ಸಂಘಟನೆಯ ಮುಖ್ಯ ಧ್ಯೇಯವಾಗಿದೆ, ಇನ್ನಿತರ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ಕೂಡ ಸಂಸ್ಥೆಯ ವತಿಯಿಂದ ಮಾಡಲಾಗಿದೆ. ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ಕೊಡಿಸುವುದು, ಅವರಿಗೆ ಆರ್ಥಿಕ ಸಹಾಯ ಒದಗಿಸುವುದು, ಸಮಾಜದ ಬಡ ಕುಟುಂಬಗಳನ್ನು ಗುರುತಿಸಿ ಜಾತಿ ಧರ್ಮ ವನ್ನೂ ಮರೆತು ಆಹಾರದ ಕಿಟ್ ಗಳನ್ನು ನೀಡಿ ಅವರ ಹಸಿವನ್ನು ತಣಿಸಿದೆ. ಬಡ ಹೆಣ್ಣುಮಕ್ಕಳ ಮದುವೆಗೆ ಸಹಾಯ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಸೌಹಾರ್ದ ಸಮಾವೇಶಗಳನ್ನು ಏರ್ಪಡಿಸಿ ಸಮಾಜದ ಭಾವನೆಯನ್ನು ಗಟ್ಟಿಗೊಳಿಸುವ ಪ್ರಯತ್ನ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಏರ್ಪಡಿಸಲಾಗಿದೆ, ಸಂಘಟನೆಯ ಎಲ್ಲಾ ಚಟುವಟಿಕೆಗಳನ್ನು ಗುರುತಿಸಿದ ವಿಶ್ವದ ಪ್ರತಿಷ್ಠಿತ ಸಂಘಟನೆಯ ಎಂಬ ಕೀರ್ತಿಗೆ ಪಾತ್ರವಾದ ಲಯನ್ಸ್ ಕ್ಲಬ್, ದಕ್ಷಿಣ ಕನ್ನಡ ಜಿಲ್ಲೆಯ 100 ನೇ ಸಂಘ ಸ್ಥಾಪಿಸಲು ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥೆಗೆ ಅವಕಾಶ ನೀಡಿರುವುದು ಇವರ ಸಾಧನೆಗೆ ಸಿಕ್ಕಿದ ಗೌರವವಾಗಿದೆ ನಿಜಕ್ಕೂ ಶ್ಲಾಘನೀಯ ಎಂದು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

  ನಾಲ್ಕನೇ ವರ್ಷ ದ ಪ್ರಯುಕ್ತ ವೈವಿಧ್ಯಮಯ ಜನಪರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು ಆ ಪ್ರಯುಕ್ತ ಒಂದು ಕಡು ಬಡ ಕುಟುಂಬದ ಹೆಣ್ಣು ಮಗಳ ಮದುವೆಗೆ ಬಟ್ಟೆ ಬರೆಗಳನ್ನು ಒದಗಿಸಲಾಗಿದೆ.

ಮಂಗಳೂರಿನ ಮಸ್ಜಿದ್ ಜೀನತ್ ಭಕ್ಸ್ ನ ಮಾಜಿ ಅಧ್ಯಕ್ಷರಾದ ಸಿ ಅಬ್ದುಲ್ ಹಮೀದ್ ಸ್ಮರಣಾರ್ಥ ಲಯನ್ಸ್ ಕ್ಲಬ್ ಸೆಂಚುರಿಯನ್ ಅಧ್ಯಕ್ಷ ರು ಹಾಗೂ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ನ ಮುಖ್ಯಸ್ಥರು ಆಗಿರುವ ಸಾದತ್  Farhan ರವರು ನೀಡಿದ ವಾಟರ್ ಕೂಲರ್ ಅನ್ನು ಕುದ್ರೋಳಿಯ ಹೃದಯಭಾಗದಲ್ಲಿರುವ ಆಟೋರಿಕ್ಷಾ ಪಾರ್ಕ್ ಸಮೀಪ ಸಾರ್ವಜನಿಕರಿಗೆ ಸಮರ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp
Exit mobile version