ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳ ಮನೆ ಮೇಲೆ ಸಿಸಿಬಿ ರೈಡ್: ಹಲವರು ವಶಕ್ಕೆ

Prasthutha|

ಬೆಂಗಳೂರು, ಜು.15; ನಗರದಲ್ಲಿ ಮಾದಕ ವಸ್ತುಗಳ‌ ಮಾರಾಟ ಸರಬರಾಜು ಹಾಗೂ ಸೇವನೆ ಪ್ರಕರಣಗಳಲ್ಲಿ ವಿದೇಶಿಯರ ಪಾತ್ರ ಕಂಡು ಬಂದ ಹಿನ್ನೆಲೆಯಲ್ಲಿ‌ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳ ಮನೆಗಳ ಮನೆ ಮೇಲೆ ಬೆಳ್ಳಂಬೆಳ್ಳಗೆ ದಾಳಿ ನಡೆಸಿದ್ದಾರೆ.

- Advertisement -


ನಗರದ ಪೂರ್ವ ವಿಭಾಗ ಹಾಗೂ ಈಶಾನ್ಯ, ವೈಟ್ ಫೀಲ್ಡ್ ವಲಯ ಸೇರಿದಂತೆ ನಗರದಲ್ಲಿನ ವಿದೇಶಿಯರ ಮನೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ದಾಖಲಾತಿ ಪರಿಶೀಲನೆ ನಡೆಸಿದ್ದಾರೆ.
ಕಮ್ಮನಹಳ್ಳಿ, ಸಂಪಿಗೆಹಳ್ಳಿ, ರಾಮಮೂರ್ತಿ ನಗರ, ಬಾಣಸವಾಡಿ, ಯಲಹಂಕ, ವೈಟ್‌ ಫೀಲ್ಡ್ ಸೇರಿದಂತೆ ವಿವಿಧ ಕಡೆಗಳಲ್ಲಿ 6 ಜನ ಎಸಿಪಿ, 20 ಜನ ಇನ್ಸ್ ಪೆಕ್ಟರ್, 100 ಜನ ಕಾನ್ ಸ್ಟೇಬಲ್ ಗಳಿಂದ ದಾಳಿ‌ ನಡೆಸಿ 7 ಕ್ಕಿಂತ ಹೆಚ್ಚು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಪೂರ್ವ ವಿಭಾಗದಲ್ಲಿ ಎಸಿಪಿ ಗೌತಮ್ ನೇತೃತ್ವದ ತಂಡ 40 ಕ್ಕಿಂತ ಹೆಚ್ಚು ವಿದೇಶಿ ಪ್ರಜೆಗಳ ಮನೆಗಳ ಮೇಲೆ ದಾಳಿ ನಡೆಸಿದೆ. ಈಶಾನ್ಯ ವಿಭಾಗದಲ್ಲಿ 60 ಕ್ಕಿಂತ ಹೆಚ್ಚು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ವೈಟ್ ಫೀಲ್ಡ್ ಡಿವಿಷನ್​ನಲ್ಲಿ ಎಸಿಪಿ‌ ಪರಮೇಶ್ವರ್ ನೇತೃತ್ವದ ತಂಡ 12 ವಿದೇಶಿ ಪ್ರಜೆಗಳ ನಿವಾಸದ ಮೇಲೆ ದಾಳಿ ನಡೆಸಿ ನಾಲ್ವರು ಬಂಧಿಸಿದ್ದಾರೆ. ಈ ಪೈಕಿ‌ ಓರ್ವ ವಿದೇಶಿ ಪ್ರಜೆ ಮನೆಯಲ್ಲಿ 15 ಗ್ರಾಂ ಗಾಂಜಾ ಪತ್ತೆಯಾಗಿದೆ.
ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನೆಲೆಸಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.

Join Whatsapp