ಪ್ರವೀಣ್ ಹತ್ಯೆ ಆರೋಪದಲ್ಲಿ ಅಮಾಯಕರು ವಶಕ್ಕೆ: ನ್ಯಾಯ ಕೇಳಲು ಹೋದ ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸಿದ ಸಿಸಿಬಿ ಇನ್ಸ್’ಪೆಕ್ಟರ್

Prasthutha|

ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಎಂಬಾತನ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವ ನೆಪದಲ್ಲಿ ವಶಕ್ಕೆ ಪಡೆದ ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಸಿಸಿಬಿ ಠಾಣೆಗೆ ತೆರಳಿದ ಮಹಿಳೆಯರ ಮೇಲೆ ಸಿಸಿಬಿ ಇನ್ಸ್’ಪೆಕ್ಟರ್ ಮಹೇಶ್ ಪ್ರಸಾದ್ ದಬ್ಬಾಳಿಕೆ ನಡೆಸಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

- Advertisement -

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಎಂಬಾತನ ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವ ನೆಪದಲ್ಲಿ ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ಕೆಲವು ಅಮಾಯಕರನ್ನು ವಶಕ್ಕೆ ಪಡೆದು ಹಿಂಸಿಸುತ್ತಿದ್ದಾರೆ ಎಂದು ಆರೋಪಿಸಿ ಶಂಕಿತರ ಕುಟುಂಬದ ಮಹಿಳೆಯರು ಸಿಸಿಬಿ ಠಾಣೆಗೆ ತೆರಳಿದ್ದರು. ಈ ವೇಳೆ ಸಿಸಿಬಿ ಇನ್ಸ್’ಪೆಕ್ಟರ್ ಮಹೇಶ್ ಪ್ರಸಾದ್ ಅವರು ನ್ಯಾಯ ಕೇಳಲು ಹೋದ ಮಹಿಳೆಯರನ್ನು ಗದರಿಸಿ ದಬ್ಬಾಳಿಕೆ ನಡೆಸಿದ್ದಾರೆ ಎಂಬ ದೂರು ದಟ್ಟವಾಗಿ ಕೇಳಿ ಬರುತ್ತಿದೆ.

ಅಲ್ಲದೆ ಠಾಣೆಯ ಆವರಣವನ್ನು ಬಿಟ್ಟು ತೆರಳದೇ ಹೋದಲ್ಲಿ ಇಲ್ಲಿ ಸೇರಿದವರ ಮೇಲೆಯೇ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.

- Advertisement -

ನ್ಯಾಯ ಕೇಳಲು ಹೋದ ಸಂತ್ರಸ್ತ ಮಹಿಳೆಯರ ಮೇಲೆ ಅಮಾನವೀಯವಾಗಿ ನಡೆದ ಸಿಸಿಬಿ ಇನ್ಸ್’ಪೆಕ್ಟರ್ ಮಹೇಶ್ ಪ್ರಸಾದ್ ಅವರ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Join Whatsapp
Exit mobile version