Home ಟಾಪ್ ಸುದ್ದಿಗಳು ಡ್ರಗ್ಸ್ ಪೆಡ್ಲರ್ ಗಳಿಸಿದ್ದ 1 ಕೋಟಿ 60 ಲಕ್ಷ ಮೌಲ್ಯದ ಆಸ್ತಿ ಸಿಸಿಬಿ ಮುಟ್ಟುಗೋಲು

ಡ್ರಗ್ಸ್ ಪೆಡ್ಲರ್ ಗಳಿಸಿದ್ದ 1 ಕೋಟಿ 60 ಲಕ್ಷ ಮೌಲ್ಯದ ಆಸ್ತಿ ಸಿಸಿಬಿ ಮುಟ್ಟುಗೋಲು

ಬೆಂಗಳೂರು: ಮಾದಕ ಸರಬರಾಜು ದಂಧೆ ಮೂಲಕ ಗಳಿಸಿದ್ದ ಆರೋಪಿಯ ಆಸ್ತಿಯನ್ನು ಸಿಸಿಬಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.


ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಜೋಡಿಪುರದ ಮೃತ್ಯುಂಜಯ(53) ಗಳಿಸಿದ್ದ ಆಸ್ತಿ ಜಪ್ತಿ ಮಾಡುವ‌ ಮೂಲಕ ಡ್ರಗ್ಸ್ ದಂಧೆಕೋರರಿಗೆ ಖಡಕ್​ ಎಚ್ಚರಿಕೆ ನೀಡಿದ್ದಾರೆ.
ಮೃತ್ಯುಂಜಯ ಎಂಬ ಆರೋಪಿ ಮಾದಕ ಸರಬರಾಜು ದಂಧೆಯಿಂದ ಗಳಿಸಿದ್ದ 1 ಕೋಟಿ 60 ಲಕ್ಷ ಮೌಲ್ಯದ ಆಸ್ತಿಯನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ‌.


ಕಳೆದ 2007ರಿಂದಲೂ ಸುಮಾರು 9 ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮೃತ್ಯುಂಜಯ ಇದೇ ವರ್ಷ ಜುಲೈನಲ್ಲಿ ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ. ಬಂಧಿತನಿಂದ 80 ಲಕ್ಷ ಮೌಲ್ಯದ ವಿವಿಧ ಮಾದರಿಯ ಮಾದಕ ಪದಾರ್ಥಗಳನ್ನ ವಶಕ್ಕೆ ಪಡೆಯಲಾಗಿತ್ತು.


ಆರೋಪಿಯ ಹೆಸರಿನಲ್ಲಿದ್ದ ಹೊಸಕೋಟೆ ಟೌನ್​ನ 1 ವಾಣಿಜ್ಯ ನಿವೇಶನ, ಕೋಲಾರದ ಕೆಂಚಿಪುರ ಹಾಗೂ ಕಂಬಿಪುರದಲ್ಲಿರು 2 ನಿವೇಶನಗಳು, 6 ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 44,387 ರೂ. ಹಣ ಜಪ್ತಿ ಮಾಡಲಾಗಿದೆ. ಆರೋಪಿಯ ಪತ್ನಿಯ ಬ್ಯಾಂಕ್ ಖಾತೆಗಳಿಗೆ ವಿವಿಧ ಮೂಲದಿಂದ 5 ಕೋಟಿಗೂ ಅಧಿಕ ಹಣ ಅಕ್ರಮವಾಗಿ ಸಂದಾಯವಾಗಿರುವುದು ಸಹ ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ

Join Whatsapp
Exit mobile version