Home ಟಾಪ್ ಸುದ್ದಿಗಳು ಸಿಬಿಎಸ್​ಇ ದ್ವಿತೀಯ ಪಿಯುಸಿ ಫಲಿತಾಂಶ ಮಧ್ಯಾಹ್ನ 2 ಗಂಟೆಗೆ ಪ್ರಕಟ

ಸಿಬಿಎಸ್​ಇ ದ್ವಿತೀಯ ಪಿಯುಸಿ ಫಲಿತಾಂಶ ಮಧ್ಯಾಹ್ನ 2 ಗಂಟೆಗೆ ಪ್ರಕಟ

ದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿಯು (CBSE) ದ್ವಿತೀಯ ಪಿಯುಸಿ ತರಗತಿ ಪರೀಕ್ಷೆಯ ಫಲಿತಾಂಶವು ಇಂದು (ಜುಲೈ 30) ಮಧ್ಯಾಹ್ನ 2 ಗಂಟೆಗೆ ಪ್ರಕಟಗೊಳ್ಳಲಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶವು (CBSE Class 12 Result 2021) ಬೋರ್ಡ್​ನ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಾಗಲಿದ್ದು, cbseresults.nic.in ಅಥವಾ digilocker.gov.in ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ.

ಅದಲ್ಲದೆ ಡಿಜಿಲಾಕರ್​ ಆ್ಯಪ್​ನಲ್ಲಿ ಕೂಡಾ ಫಲಿತಾಂಶ ನೋಡಬಹುದಾಗಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಲಗತ್ತಿಸುವ ಮೂಲಕ ಫಲಿತಾಂಶ ಪಡೆಯಬಹುದಾಗಿದೆ. ಈ ಬಗ್ಗೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಅಧಿಕೃತ ಮಾಹಿತಿ ನೀಡಿದೆ.

ಕೊರೊನಾ ಎರಡನೇ ಅಲೆ ಕಾರಣದಿಂದಾಗಿ ಈ ವರ್ಷ ಸಿಬಿಎಸ್​ಇ 12ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು. ಹೀಗಾಗಿ ಪರ್ಯಾಯ ಮೌಲ್ಯಮಾಪನ ನೀತಿಯಡಿ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಲಾಗುತ್ತಿದ್ದು, ಇಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಎಸ್​ಎಸ್​ಎಲ್​ಸಿ, ಪ್ರಥಮ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಪಡೆದುಕೊಂಡಿರುವ ಅಂಕಗಳ ಆಧಾರದ ಮೇಲೆ 12ನೇ ತರಗತಿಯ ಫಲಿತಾಂಶ ನೀಡಲು ಸಿಬಿಎಸ್‌ ಮಂಡಳಿ ಮುಂದಾಗಿದೆ. ಇಂದಿನ ಫಲಿತಾಂಶದ ಬಗ್ಗೆ ಯಾವುದೇ ಅಸಮಾಧಾನವಿದ್ದಲ್ಲಿ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಪಡೆಯಲು ಅವಕಾಶವನ್ನೂ ನೀಡಲಾಗಿದೆ.

Join Whatsapp
Exit mobile version