ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯಿಂದ CBSE MATHEMATICS ತರಬೇತಿ ಕಾರ್ಯಕ್ರಮ

Prasthutha|

- Advertisement -

ಮಂಗಳೂರು: CBSE ಸಹಭಾಗಿತ್ವದಲ್ಲಿ ಅಲ್ ಫುರ್ಖಾನ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಎರಡು ದಿನದ ಗಣಿತ ವಿಷಯದ ಕಾರ್ಯಗಾರ ಕನ್ನಡ ಭವನ ಸಭಾಂಗಣ ಮೂಡಬಿದ್ರೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು.

ದಕ್ಷಿಣ ಕನ್ನಡದಲ್ಲಿ ಮೊದಲ ಬಾರಿ ಆಯೋಜಿಸುತ್ತಿರುವ CBSE ವಿಷಯವಾರು ತರಬೇತಿ ಕಾರ್ಯಕ್ರಮ ಇದರ ಉದ್ಘಾಟನೆಯನ್ನು ಸುರೇಶ್ ಮಹಾಲಿಂಗಾಪುರ ಪ್ರಾಚಾರ್ಯರು, ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಸಿ ಬಿ ಯ ಸಿ ತರಬೇತಿ ಸಂಯೋಜಕರು ಮತ್ತು ಡಾ.ಗಿರೀಶ್ ಕುಮಾರ್ ಪ್ರಾಚಾರ್ಯರು, ಪೊದಾರ್ ಇಂಟರ್‌ನ್ಯಾಷನಲ್ ಶಾಲೆ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಸಿ ಬಿ ಯ ಸಿ ಉಪ ತರಬೇತಿ ಸಂಯೋಜಕರು ಇವರು ಸಸ್ಯಕ್ಕೆ ನೀರುಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

- Advertisement -

ಕಲಿಕೆಯ ಮೂಲಕ ಶಿಕ್ಷಕರನ್ನು ಸಬಲೀಕರಣಗೊಳಿಸುವುದು CBSE ಗಣಿತದ ಸಾಮರ್ಥ್ಯ- ಆಧಾರಿತ ಮೌಲ್ಯಮಾಪನ ತರಬೇತಿ ಕಾರ್ಯಕ್ರಮ ನಮ್ಮ ತಿಳುವಳಿಕೆಯನ್ನು ಗಾಢವಾಗಿಸುತ್ತೇವೆ ಮತ್ತು ಶಿಕ್ಷಣದ ಭವಿಷ್ಯಕ್ಕಾಗಿ ನಮ್ಮ ಕೌಶಲ್ಯಗಳನ್ನು ಹೆಚ್ಚಿಸುತ್ತೇವೆ ಎಂದು ಸುರೇಶ್ ಮಹಾಲಿಂಗಾಪುರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು

ಸಂಪನ್ಮೂಲ ವ್ಯಕ್ತಿಗಳಾಗಿ ರಾಧಿಕಾ ರಾಮಚಂದ್ರನ್ ನ್ಯಾಷನಲ್ ಪಬ್ಲಿಕ್ ಶಾಲೆ, ವೈಟ್ ಫೀಲ್ದ್ ಬೆಂಗಳೂರು ಮತ್ತು ಕವಿತಾ ಮೋಹನ್, ಡೀನ್ಸ್ ಅಕಾಡೆಮಿ, ಬೆಂಗಳೂರು ಭಾಗವಹಿಸಿದ್ದರು. ಅತಿಥಿಗಳಾಗಿ ಸುರೇಶ್ ಮಹಾಲಿಂಗಾಪುರ, ಡಾ.ಗಿರೀಶ್ ಕುಮಾರ್, ಹಾಗೂ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಮೊಹಮ್ಮದ್ ಅಶ್ಫಕ್, ಆಡಳಿತಾಧಿಕಾರಿ ಮೊಹಮ್ಮದ್ ಶಹಮ್, ಮತ್ತು ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಉಪಸ್ಥಿತರಿದ್ದರು. ಬೋಧಕ ಸಿಬ್ಬಂದಿಯಾದ ಮಹಮ್ಮದ್ ನಾಸಿರ್ ಕಾರ್ಯಕ್ರಮ ನಿರೂಪಿಸಿದ್ದರು.



Join Whatsapp
Exit mobile version