Home ಟಾಪ್ ಸುದ್ದಿಗಳು ಡಿಕೆಶಿ ಪುತ್ರಿ ಐಶ್ವರ್ಯಗೆ CBI ನೋಟಿಸ್: 10 ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಡಿಕೆಶಿ ಪುತ್ರಿ ಐಶ್ವರ್ಯಗೆ CBI ನೋಟಿಸ್: 10 ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿಗೆ ಸಿಬಿಐ ನೋಟಿಸ್ ಕೊಟ್ಟಿದ್ದು, 10 ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಡಿಕೆಶಿ ಅಕ್ರಮ ಆಸ್ತಿ ಸಂಪಾದನೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಎರಡು ತಿಂಗಳ ಹಿಂದೆ ಡಿಕೆಶಿ ಒಡೆತನದ ಕಾಲೇಜಿನಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಎರಡು ತಿಂಗಳು ನಿರಂತರವಾಗಿ ದಾಖಲೆಗಳನ್ನು ಪರಿಶೀಲಿಸಿ ಬಳಿಕ ಗ್ಲೋಬಲ್ ಕಾಲೇಜಿನ ನಿರ್ದೇಶಕಿ ಐಶ್ವರ್ಯಗೆ ನೋಟಿಸ್ ನೀಡಿದ್ದಾರೆ.


ಈ ಹಿಂದೆ ಡಿಕೆಶಿ ಸಿಬಿಐ ಮುಂದೆ ವಿಚಾರಣೆಗೆ ಹಾಜರಾಗಿದ್ದಾಗ, ಕಾಲೇಜು ಟ್ರಸ್ಟ್ ನ ಅಡಿಯಲ್ಲಿ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದಾದ ಬಳಿಕ ತನಿಖೆ ನಡೆಸಿ ಕಾಲೇಜಿನ ಫೀಸ್, ಕಾಲೇಜಿನ ಆಯವ್ಯಯ ಪಟ್ಟಿಯ ಸಮೇತ ವಿಚಾರಣೆಗೆ ಹಾಜರಾಗಲು ಐಶ್ವರ್ಯಗೆ ನೋಟಿಸ್ ನೀಡಿದೆ.

Join Whatsapp
Exit mobile version