Home ಕರಾವಳಿ ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆ: ದ.ಕ ಗಡಿ ಭಾಗದ ಭೇಟಿಯನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿದ ಸಿಎಂ

ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆ: ದ.ಕ ಗಡಿ ಭಾಗದ ಭೇಟಿಯನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿದ ಸಿಎಂ

ಮಂಗಳೂರು: ಕೋವಿಡ್-19 ಪರಿಸ್ಥಿತಿ ಪರಾಮರ್ಶೆಗೆ ಎರಡು ದಿನಗಳ ಕರಾವಳಿ ಜಿಲ್ಲೆ ಭೇಟಿ ಕೈಗೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿಯವರು ಇಂದು ತಲಪಾಡಿ ಚೆಕ್ ಪೋಸ್ಟ್ ಗೆ ಭೇಟಿ ನೀಡಿ ಗಡಿಭಾಗದ ಪರಿಸ್ಥಿತಿಯನ್ನು ತಪಾಸಣೆ ಮಾಡುವ ಕಾರ್ಯಕ್ರಮವಿತ್ತು. ಆದರೆ ಕೊನೆ ಕ್ಷಣದಲ್ಲಿ ರದ್ದಾಗಿದೆ.

ನೆರೆ ರಾಜ್ಯ ಕೇರಳದಿಂದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದೊಳಗೆ ಬರುವುದನ್ನು ತಡೆಯಲು ತಲಪಾಡಿ ಚೆಕ್ ಪೋಸ್ಟ್ ಬಳಿ ಕಟ್ಟುನಿಟ್ಟಿನ ತಪಾಸಣೆ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಇದು ಸಹಜವಾಗಿ ಕೇರಳಿಗರನ್ನು ಕೆರಳಿಸಿದೆ.
ಕೇರಳ ರಾಜ್ಯದ ಕಾರ್ಯಕರ್ತರು ಮುಖ್ಯಮಂತ್ರಿಗಳು ಬಂದರೆ ತೀವ್ರ ಪ್ರತಿಭಟನೆ ನಡೆಸಿ ಕಪ್ಪು ಧ್ವಜ ಹಾರಿಸಿ ತಮ್ಮ ಅಸಹನೆ, ಆಕ್ರೋಶವನ್ನು ವ್ಯಕ್ತಪಡಿಸಬಹುದು ಹಾಗೂ ಯಾವುದೇ ರೀತಿಯ ಅಹಿತಕರ ಘಟನೆ ನಡೆಯುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಸಿಎಂ ಬೊಮ್ಮಾಯಿಯವರ ಇಂದಿನ ತಲಪಾಡಿ ಚೆಕ್ ಪೋಸ್ಟ್ ಭೇಟಿ ರದ್ದಾಗಿದೆ.

ಇಂದು ಮುಖ್ಯಮಂತ್ರಿಗಳು ಸ್ಥಳಕ್ಕೆ ಹೋದರೆ ಕೇರಳದ ವಿವಿಧ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಯೋಜನೆ ಹಾಕಿಕೊಂಡಿದ್ದರು. ಈಗಾಗಲೇ ಅಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು ಸಿಎಂ ಭೇಟಿ ಕೊಟ್ಟರೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ ಎಂದು ಪೊಲೀಸ್ ಇಲಾಖೆ ತಿಳಿಸಿವೆ.

Join Whatsapp
Exit mobile version