Home ಟಾಪ್ ಸುದ್ದಿಗಳು ಬ್ಯಾಂಕ್ ವಂಚನೆ ಪ್ರಕರಣ: ಎಬಿಜಿ ಶಿಪ್’ಯಾರ್ಡ್ ಮುಖ್ಯಸ್ಥ ಕಮಲೇಶ್ ಅಗರ್ವಾಲ್ ಬಂಧನ

ಬ್ಯಾಂಕ್ ವಂಚನೆ ಪ್ರಕರಣ: ಎಬಿಜಿ ಶಿಪ್’ಯಾರ್ಡ್ ಮುಖ್ಯಸ್ಥ ಕಮಲೇಶ್ ಅಗರ್ವಾಲ್ ಬಂಧನ

ನವದೆಹಲಿ: 22,842 ಕೋಟಿ ರೂ. ಗೂ ಅಧಿಕ ಮೊತ್ತದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಬಿಜಿ ಶಿಪ್’ಯಾರ್ಡ್ ಲಿಮಿಟೆಡ್’ನ ಸಂಸ್ಥಾಪಕ, ಮಾಜಿ ಅಧ್ಯಕ್ಷ ಕಮಲೇಶ್ ಅಗರ್ವಾಲ್ ಅವರನ್ನು ಸಿಬಿಐ ಬುಧವಾರ ಬಂಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕೇಂದ್ರೀಯ ತನಿಖಾ ದಳ (ಸಿಬಿಐ), ಕಂಪೆನಿಯ ಮಾಜಿ ಅಧ್ಯಕ್ಷ ಅಗರ್ವಾಲ್ ಮತ್ತು ಇತರರ ವಿರುದ್ಧ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ವಿಶ್ವಾಸದ್ರೋಹ ಮತ್ತು ಹುದ್ದೆಯ ದುರುಪಯೋಗದ ಆರೋಪದ ಆಧಾರದಲ್ಲಿ ಐಪಿಸಿ ಸೆಕ್ಷನ್ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು.

ಕಂಪೆನಿಯು ಐಸಿಐಸಿಐ ಬ್ಯಾಂಕ್ ನೇತೃತ್ವದ 28 ಬ್ಯಾಂಕ್’ಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯಗಳನ್ನು ಪಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ 2012 ಮತ್ತು 2017 ರ ನಡುವೆ ವಿಧಿವಿಜ್ಞಾನ ಲೆಕ್ಕಪರಿಶೋಧನೆಯಲ್ಲಿ ಆರೋಪಿಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಮತ್ತು ಹಣವನ್ನು ತಿರುಗಿಸುವುದು, ದುರುಪಯೋಗಪಡಿಸಿಕೊಳ್ಳುವುದು ಮತ್ತು ವಿಶ್ವಾಸದ್ರೋಹ ಎಸೆಗಿರುವುದು ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡಿರುವುದು ಸಾಬೀತಾಗಿದೆ.

Join Whatsapp
Exit mobile version