Home ಟಾಪ್ ಸುದ್ದಿಗಳು ಜಾನುವಾರು ಕಳ್ಳಸಾಗಣೆ ಪ್ರಕರಣ: ಟಿಎಂಸಿ ಬಿರ್ಭುಮ್ ಜಿಲ್ಲಾ ಮುಖ್ಯಸ್ಥನ ಬಂಧನ

ಜಾನುವಾರು ಕಳ್ಳಸಾಗಣೆ ಪ್ರಕರಣ: ಟಿಎಂಸಿ ಬಿರ್ಭುಮ್ ಜಿಲ್ಲಾ ಮುಖ್ಯಸ್ಥನ ಬಂಧನ

ಕಲ್ಕತ್ತ: ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿಕಟವರ್ತಿ ಟಿಎಂಸಿ ಬಿರ್ಭುಮ್ ಜಿಲ್ಲಾ ಅಧ್ಯಕ್ಷ ಅನುಬ್ರತಾ ಮೊಂಡಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಬಂಧಿಸಿದೆ.

ಟಿಎಂಸಿ ನಾಯಕನನ್ನು ಈಗ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗುತ್ತಿದ್ದು, ಇದಕ್ಕೂ ಮುನ್ನ, ಸಿಬಿಐ  ತಂಡವು ಬಿರ್ಭುಮ್ ನ ಬೋಲ್ಪುರದಲ್ಲಿರುವ ಮೊಂಡಲ್ ಅವರ ನಿವಾಸಕ್ಕೆ ಆಗಮಿಸಿದೆ.

ಜಾನುವಾರು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕೇಂದ್ರ ತನಿಖಾ ದಳ (ಸಿಬಿಐ) ಆಗಸ್ಟ್ 5 ರಂದು ಮೊಂಡಲ್ ಅವರಿಗೆ ನೋಟಿಸ್ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ.

ಕಲ್ಕತ್ತದ ನಿಜಾಮ್ ಪ್ಯಾಲೇಸ್ ನಲ್ಲಿರುವ ಸಿಬಿಐ ಕಚೇರಿಗೆ ಆಗಸ್ಟ್ 8ರ ಸೋಮವಾರ ಹಾಜರಾಗುವಂತೆ ಮೊಂಡಲ್ ಅವರಿಗೆ ಸೂಚಿಸಲಾಗಿತ್ತು.

2020 ರ ಸೆಪ್ಟೆಂಬರ್ 21 ರಂದು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಅಕ್ರಮ ಜಾನುವಾರು ಕಳ್ಳಸಾಗಣೆಗೆ ಸಂಬಂಧಿಸಿದಂತೆ ಮಾಜಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಕಮಾಂಡೆಂಟ್ ಅವರನ್ನು ಸಿಬಿಐ ಬಂಧಿಸಿತ್ತು.

Join Whatsapp
Exit mobile version