‘ಕ್ಯಾಚ್’ ‘ದಿ’ ‘ಬೀಟ್’ ಅಂತಾರಾಜ್ಯ ನೃತ್ಯ ಸ್ಪರ್ಧೆ: ಮಡಿಕೇರಿ ಗುರುಕುಲ ಕಲಾ ಮಂಡಳಿ ತಂಡ ಪ್ರಥಮ

Prasthutha|

ಮಡಿಕೇರಿ: ಅಂತಾರಾಜ್ಯ ಮೊಗೇರ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿ ಗುರುಕುಲ ಕಲಾಮಂಡಳಿಯ ತಂಡವು ಪ್ರಥಮ ಬಹುಮಾನ ಗಳಿಸಿದೆ. ಯೂತ್ ಫ್ರೆಂಡ್ಸ್ ಪುತ್ತೂರು ಇವರ ಆಶ್ರಯದಲ್ಲಿ ಪುತ್ತೂರಿನ ನಗರ ಸಭೆಯ ಪುರಭವನದಲ್ಲಿ ಕೇರಳ ಹಾಗೂ ಕರ್ನಾಟಕ ರಾಜ್ಯದ ಮಟ್ಟದ ಮೊದಲನೆ ವರ್ಷದ ” ಕ್ಯಾಚ್ ದಿ ಬೀಟ್ ” ಸ್ಪರ್ಧೆ ನಡೆಯಿತು.

- Advertisement -

ಗುರುಕುಲ ಕಲಾಮಂಡಳಿಯ ತಂಡವು ಕೊಡಗಿನ ದಿನೇಶ್. ಪಿ. ಏನ್. ಹೆಬ್ಬಟ್ಟಗೇರಿ ಮಾರ್ಗದರ್ಶನದಲ್ಲಿ ಪಾಲ್ಗೊಂಡು ಪ್ರಥಮ ಬಹುಮಾನ ಗಳಿಸಿದ್ದು, ಸೀನಿಯರ್ ಸೋಲೋ ವಿಭಾಗದಲ್ಲಿ ಶಿವು ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ.

ಮಂಜಿನ ನಗರಿ ಮಡಿಕೇರಿಯ ಶಾಸ್ತ್ರಿ ನಗರದಲ್ಲಿ 6 ತಿಂಗಳ ಹಿಂದೆಯಷ್ಟೇ ಶುಭಾರಂಭಗೊಂಡಿರುವ ನೃತ್ಯ ಶಾಲೆಯಲ್ಲಿ ದಿನೇಶ್ ಹಾಗೂ ಚೇತನ್ ಅವರು ಮುಖ್ಯ ಮಾರ್ಗದರ್ಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ



Join Whatsapp