ನಮಗೆ ಯಾವುದೇ ಜಾತಿ, ಧರ್ಮ ಇಲ್ಲ ಎಂದ 1.24 ಲಕ್ಷ ವಿದ್ಯಾರ್ಥಿಗಳು | ಕೇರಳದಲ್ಲೊಂದು ಹೊಸ ಜಾತ್ಯತೀತ ಟ್ರೆಂಡ್!

Prasthutha|

ತಿರುವನಂತಪುರಂ : ಕೇರಳದಲ್ಲಿ ಜಾತ್ಯತೀತತೆಯ ಒಂದು ಹೊಸ ಟ್ರೆಂಡ್ ಆರಂಭವಾಗಿದೆ. ಅಲ್ಲಿನ ಶಾಲಾ ಕಾಲೇಜುಗಳಲ್ಲಿ ಹೊಸದಾಗಿ ದಾಖಲಾದ ಸುಮಾರು 1.24 ಲಕ್ಷ ವಿದ್ಯಾರ್ಥಿಗಳು ತಮ್ಮ ಜಾತಿ ಮತ್ತು ಧರ್ಮದ ಕಾಲಂ ಖಾಲಿ ಬಿಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕೇರಳ ಸರಕಾರವೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.

1ನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಲ್ಲಿ 1,23,630 ವಿದ್ಯಾರ್ಥಿಗಳು ತಾವು ಯಾವುದೇ ಜಾತಿ, ಧರ್ಮಕ್ಕೆ ಸೇರಿದವರಲ್ಲ ಎಂದು ಗುರುತಿಸಿಕೊಂಡಿದ್ದಾರೆ. 11-12ನೇ ತರಗತಿ ವಿದ್ಯಾರ್ಥಿಗಳಲ್ಲಿ 517 ವಿದ್ಯಾರ್ಥಿಗಳು ತಮ್ಮನ್ನು ಯಾವ ಜಾತಿಯವರೆಂದು ಗುರುತಿಸಿಕೊಂಡಿಲ್ಲ ಎಂದು ಸಿಪಿಎಂ ಶಾಸಕ ಡಿ.ಕೆ. ಮುರಳಿ ಮಾಹಿತಿ ನೀಡಿದ್ದಾರೆ.

- Advertisement -

ರಾಜ್ಯಾದ್ಯಂತದ ಸುಮಾರು 9,000 ಶಾಲೆಗಳಿಂದ ಈ ಅಂಕಿಅಂಶಗಳನ್ನು ಸಂಗ್ರಹಿಸಲಾಗಿದೆ. ಆದರೆ, ಈ ಕುರಿತು ಶಿಕ್ಷಣ ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

- Advertisement -