Home ಟಾಪ್ ಸುದ್ದಿಗಳು ಜಾತಿ ನಿಂದನೆ ಆರೋಪ: ಪ್ರೀತಿಸಿ ಮದುವೆಯಾದ ನವವಿವಾಹಿತೆ ನಿಗೂಢ ಸಾವು !

ಜಾತಿ ನಿಂದನೆ ಆರೋಪ: ಪ್ರೀತಿಸಿ ಮದುವೆಯಾದ ನವವಿವಾಹಿತೆ ನಿಗೂಢ ಸಾವು !

ಕಲಬುರಗಿ: ಮದುವೆಯಾದ ಮೂರೇ ತಿಂಗಳಲ್ಲಿ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಗರದ ರಾಜಾಪುರ ಬಡಾವಣೆಯಲ್ಲಿ ನಡೆದಿದೆ.

ರಮಾಬಾಯಿ (23) ಮೃತಪಟ್ಟ ಮಹಿಳೆ.

ಕಳೆದ ಮೂರು ತಿಂಗಳ ಹಿಂದೆಯಷ್ಟೇ ರಾಹುಲ್ ಎನ್ನುವ ಯುವಕನನ್ನು ರಮಾಬಾಯಿ ಪ್ರೀತಿಸಿ ಮದುವೆಯಾಗಿದ್ದಳು‌. ರಾಹುಲ್ ರಮಾಬಾಯಿಯನ್ನು ಮನೆಯಿಂದ ಗುಟ್ಟಾಗಿ ಕರೆದೊಯ್ದು ಮದುವೆಯಾಗಿದ್ದ ಎನ್ನಲಾಗ್ತಿದೆ.

ಮದುವೆಯ ಬಳಿಕ ಗಂಡನ ಮನೆಯವರಿಂದ ನಿತ್ಯವು ಜಾತಿ ನಿಂದನೆ ಮಾಡಿ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ರಮಾಬಾಯಿ ಗುರುವಾರ ಸಂಜೆ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾಳೆ. ಗಂಡನ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version