Home ಕ್ರೀಡೆ ICC T-20 ವಿಶ್ವಕಪ್: ಚಾಂಪಿಯನ್ ಆಸ್ಟ್ರೇಲಿಯಾ, ಇತರ ತಂಡಗಳ ಬಹುಮಾನಗಳ ಪಟ್ಟಿ ಇಲ್ಲಿದೆ ನೋಡಿ

ICC T-20 ವಿಶ್ವಕಪ್: ಚಾಂಪಿಯನ್ ಆಸ್ಟ್ರೇಲಿಯಾ, ಇತರ ತಂಡಗಳ ಬಹುಮಾನಗಳ ಪಟ್ಟಿ ಇಲ್ಲಿದೆ ನೋಡಿ


ದುಬೈ: ICC T-20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 8 ವಿಕೆಟ್’ಗಳಿಂದ ಸೋಲಿಸಿದ್ದ ಆಸ್ಟ್ರೇಲಿಯಾ, ಮೊದಲ ಬಾರಿಗೆ ಚುಟುಕು ಕ್ರಿಕೆಟ್’ನ ವಿಶ್ವಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತ್ತು. ಡೇವಿಡ್ ವಾರ್ನರ್ ಸರಣಿಶ್ರೇಷ್ಠ ಹಾಗೂ ಮಿಚೆಲ್ ಮಾರ್ಶ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಈ ಬಾರಿಯ ICC T-20 ವಿಶ್ವಕಪ್ ಟೂರ್ನಿಯಲ್ಲಿ ಬಹುಮಾನದ ಮೊತ್ತವಾಗಿ ಒಟ್ಟು ₹42 ಕೋಟಿ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಈ ಮೊತ್ತವನ್ನು ಚಾಂಪಿಯನ್, ರನ್ನರ್ ಅಪ್ ಸೇರಿದಂತೆ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ 16 ತಂಡಗಳಿಗೂ ಹಂಚಲಾಗಿದೆ.
ICC T-20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ಆಸ್ಟ್ರೇಲಿಯಾ ಒಟ್ಟು ₹13.1 ಕೋಟಿ ಮೊತ್ತವನ್ನು ಪಡೆದಿದೆ. ಫೈನಲ್ ಪಂದ್ಯದ ಗೆಲುವಿಗಾಗಿ ₹ 11.9 ಕೋಟಿ ಹಾಗೂ ಸೂಪರ್ 12 ಹಂತದಲ್ಲಿ 4 ಪಂದ್ಯಗಳ ಗೆಲುವಿಗಾಗಿ ₹ 1.2 ಕೋಟಿಯನ್ನು ಹೆಚ್ಚುವರಿಯಾಗಿ ಪಡೆದಿದೆ. ರನ್ನರ್ ಅಪ್ ನ್ಯೂಜಿಲೆಂಡ್ ತಂಡವು ₹7.15 ಕೋಟಿ ಪಡೆದಿದೆ.
ಸೆಮಿಫೈನಲ್ ಕಾಣದೆ ಹೊರನಡೆದಿದ್ದ ಟೀಮ್ ಇಂಡಿಯಾ ಹಾಗೂ ಸ್ಕಾಟ್ಲೆಂಡ್, ನಮೀಬಿಯಾ ತಂಡಗಳು ತಲಾ ₹ 1.42 ಕೋಟಿ ಪಡೆದಿವೆ.


ICC T-20 ವಿಶ್ವಕಪ್ ಟೂರ್ನಿಯ ನಗದು ಬಹುಮಾನಗಳ ವಿವರ
ಆಸ್ಟ್ರೇಲಿಯಾ, ಚಾಂಪಿಯನ್, 13.1 ಕೋಟಿ
ನ್ಯೂಜಿಲೆಂಡ್, ರನ್ನರ್ಸ್-ಅಪ್, ₹ 7.15 ಕೋಟಿ
ಪಾಕಿಸ್ತಾನ , ಸೆಮಿಫೈನಲಿಸ್ಟ್ , ₹4.5 ಕೋಟಿ
ಇಂಗ್ಲೆಂಡ್, ಸೆಮಿಫೈನಲಿಸ್ಟ್ , ₹4.2 ಕೋಟಿ
ಶ್ರೀಲಂಕಾ, ಸೂಪರ್ – 12 , ₹2.02 ಕೋಟಿ
ದಕ್ಷಿಣ ಆಫ್ರಿಕಾ – ಸೂಪರ್-12, ₹1.72 ಕೋಟಿ
ಭಾರತ, ಸೂಪರ್ – 12,  ₹1.42  ಕೋಟಿ
ಸ್ಕಾಟ್ಲೆಂಡ್, ಸೂಪರ್ – 12, ₹1.42  ಕೋಟಿ
ನಮೀಬಿಯಾ, ಸೂಪರ್ – 12, ₹1.42  ಕೋಟಿ
ಬಾಂಗ್ಲಾದೇಶ, ಸೂಪರ್ – 12, ₹1.12  ಕೋಟಿ
ಅಫ್ಘಾನಿಸ್ತಾನ, ಸೂಪರ್ – 12, ₹1.12  ಕೋಟಿ
ವೆಸ್ಟ್ ಇಂಡೀಸ್, ಸೂಪರ್ – 12, ₹82 ಲಕ್ಷ
ಒಮಾನ್, ₹60 ಲಕ್ಷ
ಐರ್ಲೆಂಡ್, ₹60 ಲಕ್ಷ
ಪಪುವಾ ನ್ಯೂಗಿನಿಯಾ ₹30 ಲಕ್ಷ
ನೆದರ್ಲ್ಯಾಂಡ್ ₹30 ಲಕ್ಷ

Join Whatsapp
Exit mobile version