Home ಟಾಪ್ ಸುದ್ದಿಗಳು ತ್ರಿಪುರಾ ಗಲಭೆ ಬಳಿಕ ಹೆಚ್ಚಾದ ಸರಕಾರವನ್ನು ಟೀಕಿಸುವವರ ವಿರುದ್ಧದ ದಬ್ಬಾಳಿಕೆ ಪ್ರಕರಣಗಳು

ತ್ರಿಪುರಾ ಗಲಭೆ ಬಳಿಕ ಹೆಚ್ಚಾದ ಸರಕಾರವನ್ನು ಟೀಕಿಸುವವರ ವಿರುದ್ಧದ ದಬ್ಬಾಳಿಕೆ ಪ್ರಕರಣಗಳು

► ಹೋರಾಟಗಾರರ ಟ್ವಿಟ್ಟರ್ ಖಾತೆಗಳ ಮೇಲೆ ಹದ್ದಿನ ಕಣ್ಣು!

ತ್ರಿಪುರಾ: ತ್ರಿಪುರಾದಲ್ಲಿ ನಡೆದ ಗಲಭೆಯ ಬಳಿಕ ಬಿಜೆಪಿ ಮತ್ತು ಅದರ ನಾಯಕರನ್ನು ಟೀಕಿಸುವವರ ವಿರುದ್ಧ ಪೊಲೀಸರು ಸೇರಿದಂತೆ ಸರಕಾರವು ನಡೆಸುವ ದಬ್ಬಾಳಿಕೆ ಪ್ರಕರಣಗಳು ಹೆಚ್ಚಾಗಿದ್ದು, ಹಲವು ಹೋರಾಟಗಾರರ ಟ್ವಿಟ್ಟರ್ ಖಾತೆಗಳ ಮೆಲೂ ತೀವ್ರ ನಿಗಾ ವಹಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯ ಮೇಲಿನ ಆಪಾದಿತ ದಾಳಿಗಳ ಬಗ್ಗೆ ಕ್ರಮ ಮತ್ತು ತನಿಖೆಗೆ ಕರೆ ನೀಡಿದ ವಕೀಲರ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆ (UAPA) ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಡಿಯಲ್ಲಿ ತ್ರಿಪುರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹೋರಾಟಗಾರರ 68 ಟ್ವಿಟರ್ ಹ್ಯಾಂಡಲ್ ಗಳನ್ನು ನಿರ್ಬಂಧಿಸಲು ಮತ್ತು ಬಳಕೆದಾರರ ವಿವರಗಳನ್ನು ಒದಗಿಸಲು ಟ್ವಿಟರ್‌ ಇಂಡಿಯಾಗೆ ತ್ರಿಪುರಾ ಪೊಲೀಸರು ಸೂಚಿಸದ ಬೆನ್ನಲ್ಲೇ 24 ಖಾತೆಗಳನ್ನು ತೆಗೆದುಹಾಕಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಈ ಹ್ಯಾಂಡಲ್‌ಗಳಲ್ಲಿ ಬಿಜೆಪಿ, ಅದರ ನಾಯಕರು ಮತ್ತು ಅವರ ಸಿದ್ಧಾಂತವನ್ನು ಟೀಕಿಸಿದ್ದ ಕಾರಣಕ್ಕೆ ತ್ರಿಪುರಾ ಪೊಲೀಸರು ನಮ್ಮ ಮೇಲೆ ಧ್ವೇಷ ಸಾಧಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರು ದೂರಿದ್ದಾರೆ.

ತ್ರಿಪುರಾ ಗಲಭೆಯ ಬಳಿಕ ಅಲ್ಪಸಂಖ್ಯಾತ ಸಮುದಾಯದ ಜನರನ್ನು ತ್ರಿಪುರಾದಲ್ಲಿ ಅತ್ಯಂತ ಹೀನವಾಗಿ ಗುರಿಯಾಗಿಸಲಾಗುತ್ತಿದ್ದು ತ್ರಿಪುರಾ ಗಲಭೆಗೆ ಸಂಬಂಧಪಟ್ಟಂತೆ ಸತ್ಯಶೋಧನೆಗೆ ಬಂದ ವಕೀಲರ ವಿರುದ್ಧವೇ UAPA ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇದೀಗ ವಕೀಲರು ಪೊಲೀಸ್ ಕ್ರಮದ ವಿರುದ್ದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ. ಧಾರ್ಮಿಕ ಗುಂಪುಗಳ ನಡುವಿನ ದ್ವೇಷ” ಮತ್ತು “ವಿವಿಧ ಧಾರ್ಮಿಕ ಸಮುದಾಯಗಳ ಜನರನ್ನು ಶಾಂತಿ ಭಂಗಕ್ಕೆ ಕಾರಣವಾಗುವಂತೆ ಪ್ರಚೋದಿಸುವುದು” ಮೊದಲಾದುವುದನ್ನು ಉಲ್ಲೇಖಿಸಿಯೂ ತ್ರಿಪುರಾ ಪೊಲೀಸರು ನೋಟಿಸ್ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮ ಪೋಸ್ಟ್ ಗಳು ತ್ರಿಪುರಾದಲ್ಲಿನ ಸಮುದಾಯಗಳಲ್ಲಿ ಅಪನಂಬಿಕೆಯನ್ನು ಸೃಷ್ಟಿಸಲು ಮತ್ತು ತ್ರಿಪುರಾದ ಶಾಂತಿ-ಪ್ರೀತಿಯ ನಿವಾಸಿಗಳ ಖ್ಯಾತಿಯನ್ನು ಕೆಡಿಸಲು ನಕಲಿ ಫೋಟೋಗಳು, ತಿರುಚಿದ ಸುದ್ದಿಗಳು ಮತ್ತು ಇತರ ಹೇಳಿಕೆಗಳನ್ನು ಬಳಸಿವೆ” ಎಂಬ ಆರೋಪವನ್ನು ಹೊರಿಸಿ ಹಲವು ಹೋರಾಟಗಾರರ ಟ್ವಿಟರ್ ಖಾತೆಗಳು ಮತ್ತು ಪುಟಗಳನ್ನು ನಿರ್ಬಂಧಿಸುವಂತೆ ತ್ರಿಪುರಾ ಪೊಲೀಸರು ಟ್ವಿಟರ್‌ ಇಂಡಿಯಾವನ್ನು ಕೇಳಿಕೊಂಡಿದ್ದಾರೆ

Join Whatsapp
Exit mobile version