Home ಟಾಪ್ ಸುದ್ದಿಗಳು ಫೇಸ್ ಬುಕ್ ನಲ್ಲಿ ಕವಿತೆ ಪ್ರಕಟಿಸಿದ್ದಕ್ಕೆ ಯುಎಪಿಎ ಅಡಿ ಪ್ರಕರಣ: ಯುವ ಕವಯಿತ್ರಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಫೇಸ್ ಬುಕ್ ನಲ್ಲಿ ಕವಿತೆ ಪ್ರಕಟಿಸಿದ್ದಕ್ಕೆ ಯುಎಪಿಎ ಅಡಿ ಪ್ರಕರಣ: ಯುವ ಕವಯಿತ್ರಿಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಗುವಾಹಟಿ: ಫೇಸ್ ಬುಕ್’ನಲ್ಲಿ ಕವಿತೆ ಪ್ರಕಟಿಸಿದ್ದಕ್ಕಾಗಿ 19 ವರ್ಷದ ವಿದ್ಯಾರ್ಥಿನಿ, ಯುವ ಕವಯಿತ್ರಿಯನ್ನು ಯುಎಪಿಎ ಅಡಿ ಬಂಧಿಸಿದ್ದ ಸರ್ಕಾರಕ್ಕೆ ಚಾಟಿ ಬೀಸಿರುವ ಅಸ್ಸಾಂ ಕೆಳ ನ್ಯಾಯಾಲಯವೊಂದು, ರಾಜ್ಯ ಪೊಲೀಸರು ಸಲ್ಲಿಸಿದ್ದ ಎಲ್ಲಾ ಆರೋಪಗಳಿಂದ ಆಕೆಯನ್ನು ಮುಕ್ತಗೊಳಿಸಿದೆ.
ಯುವ ಅಸ್ಸಾಮಿ ಕವಯಿತ್ರಿ ಬಾರ್ಶಶ್ರೀ ಬುರಾಗೊಹೈನ್ ಅವರನ್ನು ನ್ಯಾಯಾಲಯ ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ.
ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) (ಸ್ವತಂತ್ರ) ಬಣದೊಂದಿಗೆ ಸೇರಿ ‘ರಾಷ್ಟ್ರದ ವಿರುದ್ಧ ದಂಗೆಯ ಕೃತ್ಯ’ ಎಸಗಿದ್ದಾರೆ ಎಂದು ರಾಜ್ಯ ಪೊಲೀಸರು ದಾಖಲಿಸಿದ್ದ ಆರೋಪವನ್ನು ನ್ಯಾಯಾಲಯ ತಿರಸ್ಕರಿಸಿದೆ.
ಜೋರ್ಹತ್ ಜಿಲ್ಲೆಯ ಡಿಸಿಬಿ ಕಾಲೇಜಿನಲ್ಲಿ ಗಣಿತಶಾಸ್ತ್ರ ವ್ಯಾಸಂಗ ಮಾಡುತ್ತಿದ್ದ ಬಾರ್ಶಶ್ರೀ ಅವರು ಬರೆದ ಕವಿತೆಯ ಹಿನ್ನೆಲೆಯಲ್ಲಿ ಅವರನ್ನು ಸರ್ಕಾರ ಯುಎಪಿಎ ಅಡಿ ಬಂಧಿಸಿತ್ತು.

Join Whatsapp
Exit mobile version