Home ಟಾಪ್ ಸುದ್ದಿಗಳು ಐಎಸ್ಐ ಜೊತೆ ರಹಸ್ಯ ಸೇನಾ ಮಾಹಿತಿ ಹಂಚಿಕೊಳ್ಳುತ್ತಿದ್ದ ಸೈನಿಕ ಮನೋಜ್ ವಿರುದ್ಧ ಪ್ರಕರಣ ದಾಖಲು

ಐಎಸ್ಐ ಜೊತೆ ರಹಸ್ಯ ಸೇನಾ ಮಾಹಿತಿ ಹಂಚಿಕೊಳ್ಳುತ್ತಿದ್ದ ಸೈನಿಕ ಮನೋಜ್ ವಿರುದ್ಧ ಪ್ರಕರಣ ದಾಖಲು

ಪಂಜಾಬ್: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ) ಯೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಪಂಜಾಬ್ ನ ಮೃತ್ಸರ್ ಗ್ರಾಮೀಣ ಪೊಲೀಸರು ಸೇನಾ ಸಿಬ್ಬಂದಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯು ಪಾಕಿಸ್ತಾನದ ಗುಪ್ತಚರ ವಿಭಾಗದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದನು. ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದನು.

ಕೇಂದ್ರೀಯ ಸುರಕ್ಷಾ ಇಲಾಖೆಯು ಉತ್ತರಪ್ರದೇಶದಲ್ಲಿನ ಉಸರಾಹ ರಸುಲಪೂರ ಗ್ರಾಮದ ನಿವಾಸಿ ಸೈನಿಕ ಮನೋಜ ಚೌದರಿ ಇವನ ಬಗ್ಗೆ ಮಾಹಿತಿ ನೀಡಿತ್ತು ,ಆರೋಪಿ ಮನೋಜ್ ಪಾಕಿಸ್ತಾನದ ಗೂಢಚರ ಸಂಸ್ಥೆಯ ಪರ ಕೆಲಸ ಮಾಡುತ್ತಿದ್ದನು. ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನದ ಕಳ್ಳ ಸಾಗಾಣಿಕೆದಾರರ ಜೊತೆ ಮತ್ತು ಗೂಢಚರ ಸಂಸ್ಥೆಯ ಜೊತೆ ಸಂಬಂಧ ಹೊಂದಿದ್ದನು. ಮನೋಜ ಚೌದರಿ ಭಾರತೀಯ ಸೈನ್ಯದ ಮಾಹಿತಿ ಮತ್ತು ರಹಸ್ಯ ಸ್ಥಳಗಳ ಛಾಯಾಚಿತ್ರಗಳನ್ನು, ನಕ್ಷೆಗಳನ್ನು ಪಾಕಿಸ್ತಾನದ ಸಂಸ್ಥೆಗೆ ಪೂರೈಸುತ್ತಿದ್ದನು ಎಂದು ತಿಳಿದು ಬಂದಿದೆ.

Join Whatsapp
Exit mobile version