Home ಟಾಪ್ ಸುದ್ದಿಗಳು ಬಾಲ್ಯ ವಿವಾಹ: ಪೋಷಕರು ಸೇರಿದಂತೆ ಪುರೋಹಿತನ ವಿರುದ್ಧ ಕೇಸ್ ದಾಖಲು

ಬಾಲ್ಯ ವಿವಾಹ: ಪೋಷಕರು ಸೇರಿದಂತೆ ಪುರೋಹಿತನ ವಿರುದ್ಧ ಕೇಸ್ ದಾಖಲು

ಶಿವಮೊಗ್ಗ: ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದಲ್ಲಿ ಅಧಿಕಾರಿಗಳ ಕಣ್ಣುತಪ್ಪಿಸಿ ಬಾಲ್ಯ ವಿವಾಹ ನಡೆದಿರುವುದು ಬೆಳಕಿಗೆ ಬಂದಿದೆ.

ಫೆಬ್ರವರಿ 27 ರಂದು ಯಲ್ಲದಕೋಣೆಯ ನಿವಾಸಿ ರಮೇಶ್(33) ಎಂಬುವರ ಜೊತೆ ಬಳ್ಳಾರಿ ಜಿಲ್ಲೆಯ ಕೊಡ್ಲಿಗಿ ತಾಲೂಕಿನ ಕರ್ನಾರ್ ಹಟ್ಟಿಯ 16 ವರ್ಷದ ಬಾಲಕಿಯನ್ನ ಮದುವೆ ಮಾಡಲಾಗಿದೆ. ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದರೂ ಸಹ ಮದುವೆಯನ್ನು ನೆರವೇರಿಸಲಾಗಿದೆ. ಈ ಕುರಿತು ಮಕ್ಕಳ ಸಹಾಯವಾಣಿಗೆ ದೂರು ಬಂದ ಹಿನ್ನೆಲೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಯಲ್ಲದಕೋಣೆ ಗ್ರಾಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದೆ.

ಘಟನೆಗೆ ಸಂಬಂಧಿಸಿದಂತೆ ಬಾಲ್ಯ ವಿವಾಹ ಕಾಯ್ದೆಯಡಿ ರಮೇಶ್ ತಾಯಿ ಹಾಗೂ ಬಾಲಕಿಯ ತಂದೆ-ತಾಯಿ ಮತ್ತು ಮದುವೆ ಮಾಡಿಸಿದ ಪುರೋಹಿತರ ವಿರುದ್ಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Join Whatsapp
Exit mobile version