ಉಡುಪಿಯಲ್ಲಿ ನಾಲ್ವರು ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ: ವಿಕೃತಿ ಮೆರೆದ ‘ಹಿಂದೂ ಮಂತ್ರ’ ಪೇಜ್ ವಿರುದ್ಧ ಪ್ರಕರಣ ದಾಖಲು

Prasthutha|

►ಕೊಲೆ ಆರೋಪಿಯನ್ನು ಸಾಧಕನಂತೆ ಬಿಂಬಿಸಿರುವ ಹಿಂದುತ್ವವಾದಿಗಳ ಪೇಜ್

- Advertisement -


ಉಡುಪಿ: ನೇಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಸಂಘಪರಿವಾರದ ಇನ್ಸ್ಟಾಗ್ರಾಮ್ ಪೇಜ್ ಸಂಭ್ರಮಿಸಿ ಸಂದೇಶ ಹರಿಬಿಟ್ಟಿದ್ದು, ಹಿಂದೂ ಮಂತ್ರ ಎಂಬ ಹೆಸರಿನ ಖಾತೆ ವಿರುದ್ಧ ಉಡುಪಿಯ ಸೆನ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಹಿಂದು ಮಂತ್ರ’ ಎಂಬ ಪೇಜ್‌ನಲ್ಲಿ ಕೊಲೆ ಆರೋಪಿಯನ್ನು ಸಾಧಕನಂತೆ ಬಿಂಬಿಸಿರುವುದು ಕಂಡುಬಂದಿದೆ.

- Advertisement -

ಉಡುಪಿಯಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣ ಸಂಬಂಧ ಕಿಡಿಗೇಡಿಗಳು ಹತ್ಯೆಯನ್ನು ಸಂಭ್ರಮಿಸಿ ಹಿಂದೂ ಮಂತ್ರ ಹೆಸರಿನ ಇನ್ ಸ್ಟಾಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ನಲ್ಲಿ, 15 ನಿಮಿಷದಲ್ಲಿ ನಾಲ್ಕು ಮುಸ್ಲಿಮರನ್ನು ಕೊಂದು ವಿಶ್ವ ದಾಖಲೆ ನಿರ್ಮಿಸಿದ್ದಾನೆ ಎಂದು ಶೀರ್ಷಿಕೆ ಬರೆಯಲಾಗಿದೆ. ಅಲ್ಲದೆ, ಹತ್ಯೆಯ ಆರೋಪಿ ಪ್ರವೀಣ್ ಅರುಣ್ ಚೌಗುಲೆ ತಲೆಗೆ ಕಿರೀಟದ ಎಮೋಜಿ ತೊಡಿಸಲಾಗಿದೆ. ಇದರೊಂದಿಗೆ, ಉಡುಪಿಯ ಹುಡುಗಿಯರ ವಿಚಾರದಲ್ಲಿ ಯಾರು ಕೂಡ ಬರಲಿಲ್ಲ. ಹೀಗಾಗಿ ನಾವು ಕೂಡ ಈ ವಿಚಾರಕ್ಕೆ ಬರುವುದಿಲ್ಲ ಎಂದು ಬರೆಯಲಾಗಿದೆ.