Home ಟಾಪ್ ಸುದ್ದಿಗಳು ಹಡಗು ಪ್ರಯಾಣ ದರದ ವಿರುದ್ಧ ಪ್ರತಿಭಟಿಸಿದ್ದ ಲಕ್ಷದ್ವೀಪ ಸಂಸದರ ವಿರುದ್ಧ ಪ್ರಕರಣ ದಾಖಲು

ಹಡಗು ಪ್ರಯಾಣ ದರದ ವಿರುದ್ಧ ಪ್ರತಿಭಟಿಸಿದ್ದ ಲಕ್ಷದ್ವೀಪ ಸಂಸದರ ವಿರುದ್ಧ ಪ್ರಕರಣ ದಾಖಲು

ಕೊಚ್ಚಿ: ಹಡಗು ಪ್ರಯಾಣ ದರದ ವಿರುದ್ಧ ಪ್ರತಿಭಟನೆ ನಡೆಸಿದ್ದ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಝಲ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂಸದ ಮತ್ತು ಪ್ರತಿಭಟನಾಕಾರರ ವಿರುದ್ಧ ಸಾರ್ವಜನಿಕ ಕಿರುಕುಳ ಸೇರಿದಂತೆ ನಾಲ್ಕು ಸೆಕ್ಷನ್‌ ಗಳ ಅಡಿಯಲ್ಲಿ ಕವರತ್ತಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಸತ್ತಾತ್ಮಕ ಪ್ರತಿಭಟನೆಯ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಕರಣವನ್ನು ಕಾನೂನಾತ್ಮಕವಾಗಿ ಎದುರಿಸುತ್ತೇವೆ ಎಂದು ಸಂಸದರು ಹೇಳಿದರು.

Join Whatsapp
Exit mobile version