Home ಟಾಪ್ ಸುದ್ದಿಗಳು ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಕಾಂಗ್ರೆಸ್ ಮುಖಂಡ ರಾಜಾ ಪಟೇರಿಯಾ ವಿರುದ್ಧ ಪ್ರಕರಣ ದಾಖಲು

ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಕಾಂಗ್ರೆಸ್ ಮುಖಂಡ ರಾಜಾ ಪಟೇರಿಯಾ ವಿರುದ್ಧ ಪ್ರಕರಣ ದಾಖಲು

ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ರಾಜಾ ಪಟೇರಿಯಾ ವಿರುದ್ಧ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಪೊವಾಯಿ ಪೊಲೀಸ್ ಠಾಣೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಸೋಮವಾರ ಎಫ್’ಐಆರ್ ದಾಖಲಿಸಲಾಗಿದೆ.

ಭಾನುವಾರ ಪನ್ನಾದ ಪೊವಾಯ್ ರೆಸ್ಟ್ ಹೌಸ್ ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮಂಡಲಂ ಸೆಕ್ಟರ್ ಅಧ್ಯಕ್ಷರ ಸಭೆಯಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಾಜ್ಯ ಸಚಿವ ರಾಜಾ ಪಟೇರಿಯಾ ಅವರು, ಪ್ರಧಾನಿ ಮೋದಿ ಚುನಾವಣೆಗಳನ್ನು ಕೊನೆಗೊಳಿಸುತ್ತಾರೆ, ಅವರು ಧರ್ಮ, ಜಾತಿ ಮತ್ತು ಭಾಷೆಯ ಆಧಾರದ ಮೇಲೆ ಜನರನ್ನು ವಿಭಜಿಸುತ್ತಾರೆ. ದಲಿತರು ಮತ್ತು ಬುಡಕಟ್ಟು ಜನರ ಭವಿಷ್ಯದ ಜೀವನವು ಅಪಾಯದಲ್ಲಿದೆ. ಸಂವಿಧಾನವನ್ನು ಉಳಿಸಲು ಮತ್ತು ಅಲ್ಪಸಂಖ್ಯಾತರು ಮತ್ತು ದಲಿತರ ಭವಿಷ್ಯವನ್ನು ಉಳಿಸಲು ಮೋದಿ ಅವರನ್ನು ಕೊಲ್ಲಲು ಜನರು ಸಿದ್ಧರಾಗಿರಿ ಎಂದು ಹೇಳಿದ್ದರು.

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪಟೇರಿಯಾ ವಿರುದ್ಧ ಎಫ್’ಐಆರ್ ದಾಖಲಿಸಲು ರಾಜ್ಯ ಸರ್ಕಾರ ಆದೇಶಿಸಿತ್ತು.

ಈ ಸಂಬಂಧ ಪಟೇರಿಯಾ ವಿರುದ್ಧ ಐಪಿಸಿಯ ಸೆಕ್ಷನ್ 451, 504, 505 (1) (ಬಿ), 505 (1) (ಸಿ), 506, 153-ಬಿ (1) (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Join Whatsapp
Exit mobile version