ಯುವತಿಯ ಅಪಹರಣ: ಬಿಜೆಪಿ ಉಪಾಧ್ಯಕ್ಷೆ ಸಹಿತ 11 ಮಂದಿಯ ಮೇಲೆ ಕೇಸ್ ಫೈಲ್

Prasthutha|

ಪುತ್ತೂರು: ಬಲ್ನಾಡಿನಿಂದ ಕಡಬಕ್ಕೆ ಉದ್ಯೋಗಕ್ಕೆ ಬರುತ್ತಿದ್ದ ಯುವತಿಯನ್ನು ಅಪಹರಿಸಿ ಕೇರಳಕ್ಕೆ ಸಾಗಿಸಿದ ಪ್ರಕರಣ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಬಿಜೆಪಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸೇರಿದಂತೆ ಹನ್ನೊಂದು ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.

- Advertisement -

ಪ್ರಕರಣದಲ್ಲಿ ಪ್ರಮುಖವಾಗಿ  ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪರಮೇಶ್ವರಿ ಭಟ್, ರವಿ ನಾರಾಯಣ, ಆದರ್ಶ, ಅರವಿಂದ, ನಾರಾಯಣ, ರಾಮಚಂದ್ರ, ಗುಣೇಶ್ ಆರೋಪಿಗಳು ಎಂದು ತಿಳಿದುಬಂದಿದ್ದು ಇನ್ನುಳಿದವರನ್ನೂ ಸೇರಿಸಿ ಒಟ್ಟು ಹನ್ನೊಂದು ಜನರ ಮೇಲೆ ಸಂಪ್ಯ ಠಾಣೆಯಲ್ಲಿ ಅಪಹರಣ, ಕೊಲೆಯತ್ನ ಮಾನಭಂಗ ಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ



Join Whatsapp