Home ಟಾಪ್ ಸುದ್ದಿಗಳು ಮೇಲ್ವರ್ಗದವರ ಚಡ್ಡಿ ಹೊರುವುದು ಮಲ ಹೊರುವ ಪದ್ಧತಿಗಿಂತ ಭಿನ್ನವೇನಲ್ಲ: ಪ್ರಿಯಾಂಕ್ ಖರ್ಗೆ

ಮೇಲ್ವರ್ಗದವರ ಚಡ್ಡಿ ಹೊರುವುದು ಮಲ ಹೊರುವ ಪದ್ಧತಿಗಿಂತ ಭಿನ್ನವೇನಲ್ಲ: ಪ್ರಿಯಾಂಕ್ ಖರ್ಗೆ

►ಪಠ್ಯಪುಸ್ತಕ ಪರಿಷ್ಕರಣೆ ಕೆಲಸ ಮೇಲ್ವರ್ಗದವರಿಗೆ- ಚಡ್ಡಿ ಹೊರುವ ಕೆಲಸ ದಲಿತರಿಗೆ

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಕೆಲಸ ಮೇಲ್ವರ್ಗದವರಿಗೆ. ಚಡ್ಡಿ ಹೊರುವ ಕೆಲಸ ದಲಿತರಿಗೆ. ಇದು ಬಿಜೆಪಿಯ ಆಧುನಿಕ ಮನುಧರ್ಮ ಎಂದು ಕಾಂಗ್ರೆಸ್ ಮುಖಂಡ, ಶಾಸಕ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದಲಿತರೊಬ್ಬರು RSSನವರು ಬಳಸಿ ಬಿಸಾಡಿದ ಚಡ್ಡಿ ಹೊತ್ತಿದ್ದು ಮಲ ಹೊರುವ ಪದ್ಧತಿಗಿಂತ ಭಿನ್ನವೇನಲ್ಲ.

ಅಣ್ಣಾ, ಅಂಬೇಡ್ಕರ್ರವರು ಶೋಷಿತರ ತಲೆಯ ಮೇಲೆ ಕಿರೀಟವನ್ನು ಕಾಣಬಯಸಿದ್ದರೇ ಹೊರತು ಚಡ್ಡಿಗಳನ್ನಲ್ಲ ಎಂದು ಛಲವಾದಿ ನಾರಾಯಣ ಸ್ವಾಮಿ ಅವರನ್ನು ಲೇವಡಿ ಮಾಡಿದರು.

Join Whatsapp
Exit mobile version