ಸಿರುಗುಪ್ಪ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮತ್ತು ಆಕ್ಸೆಸ್ ಇಂಡಿಯಾ ಸಹಯೋಗದಲ್ಲಿ 2020-21 ನೇ ಸಾಲಿನ 10 ನೇ ತರಗತಿ ವಿಧ್ಯಾರ್ಥಿಗಳಿಗೆ ತಮ್ಮ ಪ್ರೌಡ ಶಾಲೆ ಮುಗಿದ ನಂತರ ಯಾವ ಬಗೆಯ ಕೋರ್ಸ್ ತೆಗೆದುಕೊಳ್ಳಬೇಕೆಂದು ಗೊಂದಲ ಇರುತ್ತದೆ. ಆದಕಾರಣ 10 ನೇ ತರಗತಿ ಮಕ್ಕಳಿಗೆ ಮುಂದಿನ ವಿಧ್ಯಾಭ್ಯಾಸದ ಬಗ್ಗೆ ಅರಿವು ಮೂಡಿಸಲು ಕರಿಯರ್ ಗೈಡೆನ್ಸ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದ ಸರ್ಕಾರಿ ಪ್ರೌಢ ಶಾಲೆ ( 5 ನೇ ವಿಭಾಗ) , ಮೌಲಾನ ಅಬುಲ್ ಕಲಾಂ ಶಾಲೆ ಮತ್ತು ಸರ್ಕಾರಿ ಉರ್ದು ಶಾಲೆ ( 5 ನೇ ವಿಭಾಗ) ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸರ್ಕಾರಿ ಉರ್ದು ಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀ ಶಾಷು ಮೋದಿನ್ (ಕೆ.ಎ.ಎಸ್) ಪಾಲ್ಗೊಂಡು ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಆಕ್ಸೆಸ್ ಇಂಡಿಯಾ ಸಂಪನ್ಮೂಲ ವ್ಯಕ್ತಿ ಮುಜೀಬ್ ಉರ್ ರಹಮಾನ್ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಸಂಧರ್ಬದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಳ್ಳಾರಿ ಜಿಲ್ಲಾ ಉಪಾಧಯಕ್ಷ ಷಾಶು , ಜಿಲ್ಲಾ ಜಂಟಿ ಕಾರ್ಯದರ್ಶಿ ಹಬೀಬ್, ಸಮಿತಿ ಸದಸ್ಯ ಜಮೀರ್ , ಮುಖ್ಯ ಅತಿಥಿಯಾಗಿ ನಗರದ ಖಬರಸ್ಥಾನ ಸಮಿತಿ ಅಧ್ಯಕ್ಷರಾದ ಹಂಡಿ ಹಶೀಮ್, ಗೌರವಾಧ್ಯಕ್ಷ ಆಲಂ ಸಾಬ್ , ಖಜಾಂಚಿ ಚೌದ್ರಿ ನಜೀರ್ ಮತ್ತು ಸಮಿತಿ ಸದಸ್ಯ ಇನಾಯತುಲ್ಲಾ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ಸುರೇಶ್ ಕುಮಾರ್, ಶ್ರೀಮತಿ ಸುಮಂಗಲ, ಶ್ರೀಮತಿ ಸಾಹೇರಾ ಬಾನು ಮತ್ತು ಕ್ಯಾಂಪಸ್ ಫ್ರಂಟ್ ಮುಖಂಡರಾದ ಖಾದ್ರಿ, ಶಕ್ಷಾ, ಅಹಮದ್ , ಫರ್ಹಾನ್ ಮತ್ತು ವಿಧ್ಯಾರ್ಥಿಗಳು ಹಾಜರಿದ್ದರು.