ಮಂಗಳೂರು | ಮಲಗಿದ್ದ ಬಾಲಕನ ಸಹಿತ ಕಾರು ಟೋಯಿಂಗ್ ಮಾಡಿದ ಪೊಲೀಸರು!

Prasthutha|

ಮಂಗಳೂರು : ನಗರದ ಕದ್ರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಲ್ಲಿಸಲಾಗಿದ್ದ ಕಾರಿನೊಳಗೆ ಬಾಲಕನಿದ್ದಂತೆಯೇ ಪೊಲೀಸರು ಟೋಯಿಂಗ್ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.

- Advertisement -

ಮಿಜಾರಿನ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳು ಮತ್ತು ಚಾಲಕನ ಜೊತೆ ನಗರಕ್ಕೆ ಶಾಪಿಂಗ್ ಗೆ ಬಂದಿದ್ದರು. ಈ ವೇಳೆ ಕದ್ರಿಯ ಗಿರಿಯಾಸ್ ಸಮೀಪ ಫೂಟ್ ಪಾತ್ ನಲ್ಲಿ ಪಾರು ಪಾರ್ಕಿಂಗ್ ಮಾಡಿದ್ದರು. ಈ ವೇಳೆ ಮಹಿಳೆಯು ತನ್ನ 7 ವರ್ಷದ ಮಗ ಮಲಗಿದ್ದ ಕಾರಣ ಅವನನ್ನು ಕಾರಿನಲ್ಲೇ ಚಾಲಕನ ಜೊತೆ ಬಿಟ್ಟು ತೆರಳಿದ್ದರು.

ಮಹಿಳೆ ಮೊಬೈಲ್ ಬಿಟ್ಟು ಹೋಗಿದ್ದು, ಕೊಡಲೆಂದು ಚಾಲಕ ಕಾರನ್ನು ಲಾಕ್ ಮಾಡಿ ಹೋಗಿದ್ದರು. ಈ ವೇಳೆ ಪೊಲೀಸರ ಟೋಯಿಂಗ್ ವಾಹನ ಅದೇ ದಾರಿಯಲ್ಲಿ ಬಂದಿದ್ದು, ಕಾರನ್ನು ತೆರವು ಮಾಡುವಂತೆ ಘೋಷಣೆ ಮಾಡಿದ್ದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಕಾರಿನ ಗಾಜಿಗೆ ಟಿಂಟ್ ಇದ್ದ ಕಾರಣ ಒಳಗೆ ಬಾಲಕ ಇದ್ದುದು ಗೊತ್ತಾಗಿರಲಿಲ್ಲ ಎನ್ನಲಾಗಿದೆ. ಹೀಗಾಗಿ ನಿರ್ವಾಹಕರು ಕಾರನ್ನು ಟೋಯಿಂಗ್ ಮಾಡಿದ್ದಾರೆ.

- Advertisement -

ಶಾಪಿಂಗ್ ಮುಗಿಸಿ ಬರುವಷ್ಟರಲ್ಲಿ ಕಾರು ನಾಪತ್ತೆಯಾಗಿತ್ತು. ಸ್ಥಳೀಯರಲ್ಲಿ ವಿಚಾರಿಸಿದಾಗ ಕಾರು ಟೋಯಿಂಗ್ ಮಾಡಿರುವುದು ಗೊತ್ತಾಯಿತು. ಠಾಣೆಗೆ ತೆರಳಿ ವಿಷಯ ತಿಳಿಸಿದಾಗ, ಸ್ವತಃ ಪೊಲೀಸರೇ ಗಾಬರಿಗೊಂಡಿದ್ದಾರೆ. ಬಾಗಿಲು ತೆಗೆದು ನೋಡಿದಾಗ, ಬಾಲಕ ಇನ್ನೂ ಮಲಗಿದ್ದುದು ಕಂಡು ಬಂತು.

ಕಾರನ್ನು ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದಕ್ಕೆ ಮತ್ತು ಟಿಂಟ್ ಹಾಕಿರುವುದಕ್ಕೆ ದಂಡ ವಿಧಿಸಿ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.   

Join Whatsapp