Home ಟಾಪ್ ಸುದ್ದಿಗಳು ಬೀಚ್ ನಲ್ಲಿ ಚಲಿಸಿ ಸಮುದ್ರದ ದಡದಲ್ಲಿ ಸಿಲುಕಿಕೊಂಡ ಕಾರ್ !

ಬೀಚ್ ನಲ್ಲಿ ಚಲಿಸಿ ಸಮುದ್ರದ ದಡದಲ್ಲಿ ಸಿಲುಕಿಕೊಂಡ ಕಾರ್ !

►ಚಾಲಕನ ವಿರುದ್ಧ ಪ್ರಕರಣ ದಾಖಲು

ಪಣಜಿ: ದೆಹಲಿ ನಿವಾಸಿಯೊಬ್ಬರು  ಬೀಚ್ ನಲ್ಲಿ ಕಾರ್ ಚಲಾಯಿಸಿದ್ದು, ಕಾರು ಸಮುದ್ರ ದಡದಲ್ಲಿ ಸಿಲುಕಿಕೊಂಡ ಘಟನೆ ಗೋವಾದ ವಗಟೋರ್ ಬೀಚ್ ನಲ್ಲಿ ನಡೆದಿದೆ.

ಲಲಿತ್ ಕುಮಾರ್ ಅವರು ತಮ್ಮ ಮಾಲೀಕನ ಕಾರನ್ನು ವಗಟೋರ್ ಬೀಚ್ ನಲ್ಲಿ ಚಲಾಯಿಸುತ್ತಿದ್ದರು. ಸಮುದ್ರದ ದಡದಲ್ಲಿ ಕಾರು ಚಲಾಯಿಸುತ್ತಿದ್ದಾಗ ವಾಹನ ಸಿಲುಕಿಕೊಂಡಿತು. ಬಳಿಕ ಈ ವಿಷಯ ಪೊಲೀಸರಿಗೆ ತಿಳಿದಿದೆ. ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಕಾರನ್ನು ವಶಪಡಿಸಿಕೊಂಡರು. ಅಲ್ಲದೆ ಗೋವಾ ಪೊಲೀಸರು ಲಲಿತ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version