Home ಟಾಪ್ ಸುದ್ದಿಗಳು ಕಾರಿಗೆ ಟ್ರಕ್ ಡಿಕ್ಕಿ; ಮದುವೆ ಮುಗಿಸಿ ವಾಪಸಾಗುತ್ತಿದ್ದ ಐವರು ಮೃತ್ಯು

ಕಾರಿಗೆ ಟ್ರಕ್ ಡಿಕ್ಕಿ; ಮದುವೆ ಮುಗಿಸಿ ವಾಪಸಾಗುತ್ತಿದ್ದ ಐವರು ಮೃತ್ಯು

ಕೊಯಮತ್ತೂರು: ಟ್ರಕ್‌- ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುಪ್ಪುರ ಜಿಲ್ಲೆಯ ಧಾರಾಪುರಂ-ಪಳನಿ ರಸ್ತೆಯಲ್ಲಿ ಸಂಭವಿಸಿದೆ.


ಮೃತರನ್ನು ತಮಿಳುಮಣಿ (51), ಚಿತ್ರಾ (49), ಸೆಲ್ವರಾಣಿ (70), ಬಾಲಕೃಷ್ಣನ್ (78), ಮತ್ತು ಕಲಾರಾಣಿ (50) ಎಂದು ಗುರುತಿಸಲಾಗಿದೆ.


ಇವರೆಲ್ಲರೂ ದಿಂಡಿಗಲ್ ಜಿಲ್ಲೆಯ ಪಳನಿಯಲ್ಲಿ ನಡೆದ ಮದುವೆ ಕಾರ್ಯಕ್ರಮ ಮುಗಿಸಿ ವಾಪಸ್‌ ಆಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version