Home ಟಾಪ್ ಸುದ್ದಿಗಳು ಬೈತಡ್ಕ ಹೊಳೆಗೆ ಬಿದ್ದ ಕಾರು: ಇಂದು ಒಂದು ಮೃತದೇಹ ಪತ್ತೆ

ಬೈತಡ್ಕ ಹೊಳೆಗೆ ಬಿದ್ದ ಕಾರು: ಇಂದು ಒಂದು ಮೃತದೇಹ ಪತ್ತೆ

ಕಾಣಿಯೂರು: ಬೈತ್ತಡ್ಕ ಹೊಳೆಗೆ ಕಾರು ಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಬೈತ್ತಡ್ಕದಿಂದ 200 ಮೀಟರ್ ದೂರ ಮರಕ್ಕಡ ಹೊಳೆಯಲ್ಲಿ ಮೃತ ದೇಹವೊಂದು ಪತ್ತೆಯಾಗಿದೆ.

ಮೃತ ದೇಹವು ಹೊಳೆಯ ಬದಿಯಲ್ಲಿದ್ದ ಮರದ ದಿಮ್ಮಿಯಲ್ಲಿ ಪತ್ತೆಯಾಗಿದೆ. ಹೊಳೆಯಲ್ಲಿ ನೀರು ಕಡಿಮೆಯಾದ ಹಿನ್ನಲೆಯಲ್ಲಿ ಮೃತ ದೇಹ ಬೆಳಕಿಗೆ ಬಂದಿದೆ.

ಶನಿವಾರ ತಡರಾತ್ರಿ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರು ಹೊಳೆಗೆ ಬಿದ್ದಿದ್ದು ವಿಟ್ಲದ ಕುಂಡಡ್ಕ ನಿವಾಸಿ ಧನುಷ್ (26) ಹಾಗೂ ಮಂಜೇಶ್ವರ ನಿವಾಸಿ ಧನುಷ್ (21) ನೀರು ಪಾಲಾಗಿದ್ದರು.

ಇವರು ಶನಿವಾರ ತಡರಾತ್ರಿ ಮಾರುತಿ 800 ಕಾರಿನಲ್ಲಿ ಪುತ್ತೂರಿನಿಂದ ಕಾಣಿಯೂರು ಕಡೆಗೆ ತೆರಳುತ್ತಿದ್ದ ವೇಳೆ ಬೈತಡ್ಕ ಗೌರಿಹೊಳೆಗೆ ಬಿದ್ದಿದ್ದು, ಆ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

Join Whatsapp
Exit mobile version