ಕೆಟ್ಟು ನಿಂತ ಕಾರು: ಆಕ್ರೋಶಗೊಂಡು ಕತ್ತೆ ಮೂಲಕ ಶೋರೂಂಗೆ ಎಳೆದು ತಂದ ಮಾಲೀಕ

Prasthutha|

ಉದಯಪುರ : ಹೊಸ ಕಾರು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಆಕ್ರೋಶಗೊಂಡ ಮಾಲೀಕನೊಬ್ಬ ಕತ್ತೆ ಮೂಲಕ ಕಾರನ್ನು ಶೋ ರೂಂಗೆ ಎಳೆದು ತಂದು ಪ್ರತಿಭಟನೆ ನಡೆಸಿದ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.

- Advertisement -


ಕಾರನ್ನು ಎರಡು ಕತ್ತೆಗಳ ಕೊರಳಿಗೆ ಕಟ್ಟಿ ಶೋರೂಂಗೆ ಎಳೆದು ತರುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಕಾರು ಮಾಲೀಕ ರಾಜ್ ಕುಮಾರ್ ಉದಯಪುರದ ಮದ್ರು ಕೈಗಾರಿಕಾ ಪ್ರದೇಶದ ಶೋರೂಂ ಒಂದರಲ್ಲಿ ಸುಮಾರು ₹18 ಲಕ್ಷ ಕೊಟ್ಟು ಹೊಸ ಕಾರು ಖರೀದಿಸಿದ್ದರು. ಖರೀಸಿದ ಪ್ರಾರಂಭದಿಂದಲೂ ಕಾರಿನಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದವು. ಸರ್ವೀಸ್ ಸೆಂಟರ್ ಗೆ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಆದರೂ ತಾಂತ್ರಿಕ ದೋಷವನ್ನು ಸಂಪೂರ್ಣವಾಗಿ ಸರಿಪಡಿಸಲು ವಿಫಲರಾಗಿದ್ದರು. ಇದರಿಂದ ಆಕ್ರೋಶಗೊಂಡ ಕಾರು ಮಾಲೀಕ ಕಾರನ್ನು ಕತ್ತೆ ಮೂಲಕ ಶೋಂರೂಂಗೆ ಎಳೆದು ತಂದಿದ್ದಾರೆ.

Join Whatsapp
Exit mobile version