Home Uncategorized ವಿರಾಜಪೇಟೆ: ಕಾರಿನ ಬ್ರೇಕ್ ಫೇಲ್, ಚಾಲಕ ಸಾವು

ವಿರಾಜಪೇಟೆ: ಕಾರಿನ ಬ್ರೇಕ್ ಫೇಲ್, ಚಾಲಕ ಸಾವು

ವಿರಾಜಪೇಟೆ: ಕಾರಿನ ಬ್ರೇಕ್ ಫೇಲ್ ಆದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಮಂಗಳವಾರ ರಾತ್ರಿ ವಿರಾಜಪೇಟೆ ಸಮೀಪದ ಪೆರುಂಬಾಡಿಯಲ್ಲಿ ಸಂಭವಿಸಿದೆ.

ಪಾಲಿಬೆಟ್ಟದಲ್ಲಿ ಹೋಟೆಲ್ ವ್ಯಾಪಾರ ಮಾಡುತ್ತಿರುವ ಪೆರುಂಬಾಡಿ ನಿವಾಸಿ ಅಬ್ದುಲ್ ರೆಹಮಾನ್ (ಅದ್ದು) (55) ಮೃತ ವ್ಯಕ್ತಿ.

ಮಂಗಳವಾರ ರಾತ್ರಿ ಪೆರುಂಬಾಡಿಯ ಮನೆಯ ಸಮೀಪದಲ್ಲಿ ಅಬ್ದುಲ್ ರೆಹಮಾನ್ ಚಾಲನೆ ಮಾಡುತ್ತಿದ್ದ ಕಾರಿನ ಬ್ರೇಕ್ ಫೇಲ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸುವ ಸಂದರ್ಭ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಅಬ್ದುಲ್ ರೆಹಮಾನ್ ಮೊಮ್ಮಗಳು ಫಾತಿಮ ನಸ್ಲ (9) ಗಂಭೀರ ಗಾಯಗಳೊಂದಿಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರು ಪತ್ನಿ ಹಾಗೂ ನಾಲ್ಕು ಮಕ್ಕಳನ್ನು ಅಗಲಿದ್ದಾರೆ.

Join Whatsapp
Exit mobile version