ಕಲ್ಲಡ್ಕ | ಬೈಕ್ – ಕಾರ್ ನಡುವೆ ಢಿಕ್ಕಿ | ಹಿಂದೂ ಸಂಘಟನೆ ಕಾರ್ಯಕರ್ತ ಸಾವು

Prasthutha|

ಬಂಟ್ವಾಳ : ಕಲ್ಲಡ್ಕ ಸಮೀಪ ಸಂಭವಿಸಿದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತಪಟ್ಟ ಯುವಕ ಯತಿರಾಜ್ ಎಂದು ಗುರುತಿಸಲಾಗಿದೆ. ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಕಾರೊಂದು ಯತಿರಾಜ್ ಅವರ ಬೈಕ್ ಗೆ ಢಿಕ್ಕಿಯಾಗಿತ್ತು. ಬೈಕ್ ಗೆ ಢಿಕ್ಕಿ ಹೊಡೆದ ಕಾರು, ಬೈಕ್ ಗೆ ಹೊಡೆದ ಬಳಿಕ, ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿತ್ತು. ಕೆಲವು ಹೊತ್ತು ಚಾಲಕನಿಗೆ ಕಾರಿನಿಂದ ಹೊರಬರಲಾಗಿರಲಿಲ್ಲ ಎನ್ನಲಾಗಿದೆ.

- Advertisement -

ಗಾಯಗೊಂಡಿದ್ದ ಯತಿರಾಜ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ರವಾನಿಸಲಾಯಿತಾದರೂ, ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಯತಿರಾಜ್ ಕಲ್ಲಡ್ಕದಲ್ಲಿ ಹಿಂದೂ ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದ ಎನ್ನಲಾಗಿದೆ.

ಅಪಘಾತದಲ್ಲಿ ಮೃತಪಟ್ಟ ಯತಿರಾಜ್, ಬಂಟ್ವಾಳ ಹರೀಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕಲ್ಲಡ್ಕ ಆಸುಪಾಸಿನಲ್ಲಿ ನಡೆದ ಹಲವು ಕೋಮುಗಲಭೆಗಳಲ್ಲಿ ಆತ ಭಾಗಿಯಾಗಿದ್ದ ಬಗ್ಗೆ ಮಾಹಿತಿಗಳಿವೆ. ಬಿಜೆಪಿ ಸಹ ಸಂಘಟನೆಯೊಂದರ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಾರು ಚಾಲಕನಾಗಿದ್ದ ಯತಿರಾಜ್, ರೌಡಿಶೀಟರ್ ಕಲ್ಲಡ್ಕ ಮಿಥುನ್ ಎಂಬಾತನ ಸಹಚರನಾಗಿದ್ದ ಎಂದು ತಿಳಿದುಬಂದಿದೆ.  

- Advertisement -